ಕಲಾದಗಿಯ ಹಣ್ಣು ಬೆಳೆಗಾರರ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಶುಭಹಾರೈಕೆ ಸಮಾರಂಭದಲ್ಲಿ ನಡೆದ ‘ದೀಪದಾನ’ ಕಾರ್ಯದಲ್ಲಿ ಡಾ.ಶಿವಾನಂದ ಕುಬಸದ, ಸಂಸ್ಥೆ ಅಧ್ಯಕ್ಷ ಕೆ.ಟಿ. ಪಾಟೀಲ, ಕಾರ್ಯದರ್ಶಿ ವಿ.ಜಿ. ದೇಶಪಾಂಡೆ ಪಾಲ್ಗೊಂಡಿದ್ದರು.  
ಜಿಲ್ಲೆ

ಬದುಕಿನ ಸಾರ್ಥಕತೆಗೆ ಗುರಿ ಒಳ್ಳೆಯದಿರಲಿ

ಕಲಾದಗಿ: ನಾವು ಪ್ರತಿದಿನ ಊಟ ಮಾಡುವಾಗ ಅನ್ನವನ್ನು ಕೇಳಿಕೊಳ್ಳಬೇಕು.ಇದು ನನ್ನ ದುಡಿಮೆಯಿಂದ ಗಳಿಸಿದ ಅನ್ನವೋ ಅಥವಾ ಬೇರೆಯವರ ಕಣ್ಣೀರಿನ ಅನ್ನವೂ ಎಂದು. ಅದು ನಿಮ್ಮ ದುಡಿಮೆಯದ್ದಾಗಿದ್ದರೆ ಅದು ಅದ್ಭುತವಾದದ್ದು. ನೀವು ಹೇಗೆ ಹಣ ಗಳಿಸಬೇಕು, ಹೇಗೆ ದಾರಿ ಕಂಡುಕೊಳ್ಳಬೇಕೆಂದರೆ ನೀವು ಊಟ ಮಾಡುವ ಅನ್ನ ನಿಮ್ಮದಾಗಿರಬೇಕು ಎಂದು ಮುಧೋಳದ ಖ್ಯಾತ ವೈದ್ಯ, ಸಾಹಿತಿ ಡಾ.ಶಿವಾನಂದ ಕುಬಸದ ತಿಳಿಸಿದರು.

ಸ್ಥಳೀಯ ಹಣ್ಣು ಬೆಳೆಗಾರರ ವಿದ್ಯಾಸಂಸ್ಥೆಯಲ್ಲಿ ಮಂಗಳವಾರ ಆಯೋಜಿಸಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಶುಭಹಾರೈಕೆ ಸಮಾರಂಭದಲ್ಲಿ ಮಾತನಾಡಿದ ಅವರು, ಹೇಗೆ ಬದುಕಬೇಕೆಂದು ಕಲಿಯುವುದೇ ನಿಜವಾದ ಶಿಕ್ಷಣ. ಪಠ್ಯದ ಜತೆಗೆ ಸನ್ನಡತೆ, ಮಾನವೀಯ ಮೌಲ್ಯಗಳಿರುವ ಸಂಸ್ಕಾರಯುತ ಶಿಕ್ಷಣವನ್ನು ಮೈಗೂಡಿಸಿಕೊಳ್ಳಬೇಕು ಎಂದರು.

ಬದುಕಿನಲ್ಲಿ ನಾವು ಆರಿಸಿಕೊಳ್ಳುವ ದಾರಿ ಹಾಗೂ ಗುರಿ ಒಳ್ಳೆಯದಿದ್ದರೆ ಬದುಕು ತಾನಾಗಿಯೇ ಸಾರ್ಥಕಗೊಳ್ಳುತ್ತದೆ. ನೀವು ಯಾವುದೇ ವೃತ್ತಿಯನ್ನು ಮಾಡಿ. ಒಳ್ಳೆಯ ಮನುಷ್ಯರಾಗಿ ಬದುಕುವ ದಾರಿಯನ್ನು ಕಂಡುಕೊಳ್ಳಿ ಎಂದರು.

ವಿದ್ಯಾಸಂಸ್ಥೆ ಕಾರ್ಯದರ್ಶಿ ವಿ.ಜಿ.ದೇಶಪಾಂಡೆ, ಹಣ್ಣು ಬೆಳೆಗಾರರ ವಿದ್ಯಾಸಂಸ್ಥೆ ಅಧ್ಯಕ್ಷ ಕೆ.ಟಿ. ಪಾಟೀಲ, ಹಣ್ಣು ಬೆಳೆಗಾರ ಪಪೂ ಕಾಲೇಜಿನ ಪ್ರಾಂಶುಪಾಲ ಎಸ್.ಬಿ.ಬಳವಾಟ ಮಾತನಾಡಿದರು.

ವಿದ್ಯಾಸಂಸ್ಥೆ ನಿರ್ದೇಶಕರಾದ ಎನ್.ಎಚ್.ಕೊಪ್ಪ, ಎಂ.ಜಿ.ಮಂಟೂರ, ಮುಖ್ಯ ಶಿಕ್ಷಕ ಆರ್.ವಿ.ಜಾಧವ, ಶ್ರೀಕಾಂತ ಕೆರಕಲಮಟ್ಟಿ, ಜಗದೀಶ ಚಾವಡಿ ಮತ್ತಿತರರಿದ್ದಾರೆ.