ಜಿಲ್ಲೆ

ವಿಭಿಜಿತವಾಗಿರುವ ಭೂಪ್ರದೇಶ ಮತ್ತೆ ಜೋಡಣೆಯಾಗಲಿ

ಇಂದಿರಾ ಎನ್ ಕೆ

ಗಂಗೊಳ್ಳಿ: ಈ ಹಿಂದಿನ ಕಹಿ ನೆನಪುಗಳನ್ನು ಮುಂದಿನ ಪೀಳಿಗೆಗೆ ಕೊಡಬೇಕು, ನೆನಪಿಡಬೇಕು ಮತ್ತು ಜಾಗೃತರಾಗಿರಬೇಕು ಎಂಬ ಉದ್ದೇಶದಿಂದ ಪ್ರತಿ ವರ್ಷ ಅಖಂಡ ಭಾರತ ಸಂಕಲ್ಪ ಕಾರ್ಯಕ್ರಮ ವಾಡುತ್ತಾ ಬಂದಿದ್ದೇವೆ. ತುಂಡಾಗಿರುವ ಹಿಂದುಗಳನ್ನು ಮತ್ತೆ ಜೋಡಿಸಬೇಕು, ತುಂಡಾಗಿರುವ ಭೂಪ್ರದೇಶವನ್ನು ಮತ್ತೆ ಜೋಡಿಸಬೇಕು, ನೆನಪು ಹೋಗಿರುವ ಹಿಂದುಗಳನ್ನು ಮತ್ತೆ ಸೇರಿಸಬೇಕು ಎಂದು ಸಾವಾಜಿಕ ಕಾರ್ಯಕರ್ತ ವಿಜಯ ಕೊಡವೂರು ಹೇಳಿದರು.

ಗಂಗೊಳ್ಳಿಯ ಹಿಂದು ಜಾಗರಣ ವೇದಿಕೆ ಆಶ್ರಯದಲ್ಲಿ ಗಂಗೊಳ್ಳಿಯಲ್ಲಿ ಗುರುವಾರ ಸಂಜೆ ನಡೆದ ಅಖಂಡ ಭಾರತ ಸಂಕಲ್ಪ ದಿನ ಮತ್ತು ಪಂಜಿನ ಮೆರವಣಿಗೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಾಯುಸೇನೆಯ ನಿವೃತ್ತ ಯೋಧ ಟಿ.ದಿನಕರ ಶೆಣೈ ಅಧ್ಯಕ್ಷತೆ ವಹಿಸಿದ್ದರು. ಗಂಗೊಳ್ಳಿಯ ಶ್ರೀ ಇಂದುಧರ ದೇವಸ್ಥಾನದ ಬಳಿಯಿಂದ ಪ್ರಾರಂಭವಾದ ಮೆರವಣಿಗೆ ಮುಖ್ಯ ರಸ್ತೆ ಮೂಲಕ ಮೇಲ್‌ಗಂಗೊಳ್ಳಿಯ ಶ್ರೀ ರಾಮ ಮಂದಿರದ ತನಕ ಸಾಗಿ ಶ್ರೀ ವೀರೇಶ್ವರ ದೇವಸ್ಥಾನದ ಬಳಿ ಸವಾಪನಗೊಂಡಿತು.

ಹಿಂದು ಜಾಗರಣ ವೇದಿಕೆ ಜಿಲ್ಲಾ ಪ್ರಮುಖ್ ವಾಸುದೇವ ದೇವಾಡಿಗ, ಗಂಗೊಳ್ಳಿ ಶ್ರೀ ಇಂದುಧರ ದೇವಸ್ಥಾನದ ಅಧ್ಯಕ್ಷ ಗುರುರಾಜ್ ಉಪಸ್ಥಿತರಿದ್ದರು. ಹಿಂಜಾವೇ ಗಂಗೊಳ್ಳಿ ಟಕ ಸಂಚಾಲಕ ಯಶವಂತ ಖಾರ್ವಿ ಸ್ವಾಗತಿಸಿ, ನಿರೂಪಿಸಿದರು.