ದೊಡವಾಡ: ರೈತರು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ದೊರೆತಾಗ ಮಾತ್ರ ಶ್ರಮಕ್ಕೆ ತಕ್ಕ ಪ್ರತಿಲ ದೊರೆಯಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸಲಾಗಿದೆ ಎಂದು ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ಗ್ರಾಮದ ಶ್ರೀ ಸಂಗಮೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂದಲ್ಲಿ ಮಂಗಳವಾರ ಸರ್ಕಾರದ ಹೆಸರು ಮತ್ತು ಉದ್ದು ಬೆಂಬಲ ಬೆಲೆ ಖರೀದಿ ಕೇಂದ್ರ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, ಪ್ರತಿ ಕ್ವಿಂಟಾಲ್ ಹೆಸರು 8,768 ರೂ., ಉದ್ದು 7,800 ರೂ.ಗಳಂತೆ ರೈತರಿಂದ ಕ್ರಮವಾಗಿ 15 ಮತ್ತು 30 ಕ್ವಿಂಟಾಲ್ ಖರೀದಿ ಮಾಡಲಾಗುತ್ತಿದೆ. ರೈತರು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಮಾಜಿ ಶಾಸಕ ಮಹಾಂತೇಶ ದೊಡಗೌಡರ, ಜೆಡಿಎಸ್ ಜಿಲ್ಲಾಧ್ಯ ಶಂಕರ ಮಾಡಲಗಿ, ವಿಜಯ ಮೆಟ್ಟಗುಡ್ಡ ಮಾತನಾಡಿದರು. ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾದ ಮಹಾಂತೇಶ ದೊಡಗೌಡರ ಮತ್ತು ಟಿಎಪಿಎಂಸಿಗೆ ಅವಿರೋಧವಾಗಿ ಆಯ್ಕೆಯಾದ ನಿಂಗಪ್ಪ ಚೌವಡನ್ನವರ ಅವರನ್ನು ಸನ್ಮಾನಿಸಲಾಯಿತು. ಕೃಷಿ ಮಾರಾಟ ಇಲಾಖೆ ಉಪ ನಿರ್ದೇಶಕ ಎಂ.ಡಿ.ಚಬನೂರ, ಕೆಎಸ್ಇಎಂಎ್ ಜಿಲ್ಲಾ ವ್ಯವಸ್ಥಾಪಕ ಚಂದ್ರಗೌಡ ಪಾಟೀಲ, ಎಪಿಎಂಸಿ ಕಾರ್ಯದರ್ಶಿ ಸುನೀಲ ಗೋಡಬೋಲೆ, ಕೃಷಿ ಅಧಿಕಾರಿ ಯಮನಪ್ಪ ಮಾದಿಗರ, ಗ್ರಾಪಂ ಅಧ್ಯೆ ಸಂಗೀತಾ ಮಡಿವಾಳಪ್ಪ ಚಂದರಗಿ, ಪಿಕೆಪಿಎಸ್ ಅಧ್ಯ ನಿಂಗಪ್ಪ ಚೌವಡನ್ನವರ, ಉಪಾದ್ಯ ಗುರುನಾಥ ತಡಕೋಡ, ಸದಸ್ಯರಾದ ಅಜ್ಜಪ್ಪ ಪಟಾತ, ಬಸವರಾಜ ಮುರಗೋಡ, ಸಂಗಮೇಶ ಅಂದಾನಶೆಟ್ಟಿ, ರಾಮಲಿಂಗಪ್ಪ್ಪ ಯರಿಕಿತ್ತೂರು, ಗಿರೀಶ ಧಾರವಾಡ, ಮಡಿವಾಳಪ್ಪ ಕರಿಗಾರ, ಮಡಿವಾಳಪ್ಪ ಶಿಂಧೆ ಇತರರಿದ್ದರು.