ಜಿಲ್ಲೆ

ದೇಶದ ರಕ್ಷಣೆಗೆ ಮುಂದಾಗಲಿ

ಪ್ರಶಾಂತ ಹೂಗಾರ

ಮಾಂಜರಿ: ವಿವಿಧತೆಯಲ್ಲಿ ಏಕತೆ ಕಾಣುವ ಭಾರತ ಮಠ-ಮಂದಿರಗಳ ದೇಶವಾಗಿದೆ. ಇಲ್ಲಿನ ಜನರು ಧರ್ಮ, ಗುರು, ಅಧ್ಯಾತ್ಮದಲ್ಲಿ ಗೌರವ, ಭಕ್ತಿ-ಭಾವ ಹೊಂದಿರುವುದು ಹೆಮ್ಮೆಯ ಸಂಗತಿ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಗ್ರಾಮದ ಕಾಡ ಸಿದ್ಧೇಶ್ವರ ಸಂಸ್ಥಾನ ಮಠದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಧರ್ಮಸಭೆ ಹಾಗೂ ವಿವಿಧ ಗಣ್ಯರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಭಾರತದ ಶಾಸ್ತ್ರ, ಪರಂಪರೆಯಲ್ಲಿ ಮೂರು ಕೋಟಿ ದೇವರ ಉಲ್ಲೇಖವಿದ್ದು, ಬಹುದೇವತಾರಾಧನೆ ದೇಶದ ಸಂಸ್ಕೃತಿಯಾಗಿದೆ. ಇಲ್ಲಿನ ಜನರು ತಮಗಿಂತ ದೇವರನ್ನೇ ಹೆಚ್ಚು ಪ್ರೀತಿ ಮಾಡುತ್ತಾರೆ. ಸ್ತ್ರೀಯರನ್ನು ಗೌರವದಿಂದ ಕಾಣಬೇಕು.

ಕಾಯ್ದೆಯ ಆಶಯದಂತೆ ವರದಕ್ಷ್ಷಣೆ ತೆಗೆದುಕೊಳ್ಳುವುದು, ಕೊಡುವುದು ನಿಲ್ಲಬೇಕು. ರೈತರು ಸೇರಿ ಎಲ್ಲರ ಬದುಕು ಉಜ್ವಲವಾಗಿರಬೇಕೆಂದು ಆಶೀರ್ವದಿಸಿದರು.

ಪರಮಾತ್ಮ ಒಬ್ಬನಾದರೂ ರೂಪಗಳು ಹಲವಾರು. ದೇಶ, ಧರ್ಮ, ಕುಟುಂಬದ ರಕ್ಷಣೆಗಾಗಿ ಹಿಂದುಗಳು ಮೂವರು ಮಕ್ಕಳನ್ನು ಹೊಂದಬೇಕು. ಪ್ರತಿಯೊಬ್ಬರೂ ದೇಶ-ಧರ್ಮದ ರಕ್ಷಣೆಗೆ ಕಂಕಣಬದ್ಧರಾಗಬೇಕು ಎಂದು ತಿಳಿಸಿದರು. ಸೇನೆಗೆ ಆಯ್ಕೆಯಾದ ಗ್ರಾಮದ ಕಾರ್ತಿಕ ಕೋಕನೆ, ಬಬಲು ಲಾಮಕಾಣಿ ಹಾಗೂ ತಜ್ಞ ವೈದ್ಯ ಡಾ.ಶಾಮ ಪಾಟೀಲ ಅವರನ್ನು ಸನ್ಮಾನಿಸಲಾಯಿತು. ಹೆಸ್ಕಾಂ ಅಧಿಕಾರಿ

ಎನ್.ಟಿ.ಪಾಟೀಲ, ವೀರಸಿಂಗ್ ಘೋರ್ಪಡೆ, ಅಣ್ಣಾಸಾಹೇಬ ಸಂಕೇಶ್ವರಿ, ಪ್ರಕಾಶ ದೇಸಾಯಿ, ರಾವಸಾಹೇಬ ಅಂಬಿ, ನಿಜಿಗೌಡ ನರವಾಡೆ, ಚಿದಾನಂದ ಮಿರ್ಜಿ, ಸಂಜಯ ಕೋಕನೆ, ಶ್ರೀಶೈಲ ಕೋಕನೆ, ರಾವಸಾಹೇಬ ಕೋರೆ, ಬಸಪ್ಪ ಕುಂಬಾರ, ಕಲ್ಲಪ್ಪ ಕುಂಬಾರ, ವಿಜಯ ಕೋಟೆವಾಲೆ, ಅಶೋಕ ಕೋಟಿವಾಲೆ ಇತರರಿದ್ದರು.