ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಹಗಲು ಹೊತ್ತಿನಲ್ಲಿಯೂ ಮಹಿಳೆ ಇಂದು ನಿರ್ಭೀತಿಯಿಂದ ಸಂಚರಿಸಲು ಕಷ್ಟಕರವಾಗುತ್ತಿದ್ದು, ಎಲ್ಲರೂ ಭಾತೃತ್ವ, ಸಹೋದರತೆ ಭಾವನೆಯಿಂದ ಭಾರತವನ್ನು ಮುನ್ನಡೆಸಬೇಕಾಗಿದೆ ಎಂದು ತಹಸೀಲ್ದಾರ್ ಪ್ರತಿಭಾ ಆರ್. ಆಶಯ ವ್ಯಕ್ತಪಡಿಸಿದರು.
ಕಾಪು ತಾಲೂಕು ಆಡಳಿತ ಹಾಗೂ ನಾಡಹಬ್ಬಗಳ ಆಚರಣಾ ಸಮಿತಿ ವತಿಯಿಂದ ಕಾಪು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮೈದಾನದಲ್ಲಿ ನಡೆದ ಸ್ವಾತಂತ್ರೊೃೀತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಾಸಕ ಗುರ್ಮೆ ಸುರೇಶ್ ಶೆಟ್ಟಿ ವಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣಾರ್ಪಣೆ ವಾಡಿರುವ ಹೋರಾಟಗಾರರಿಗೆ ಕೃತಜ್ಞತೆ ಸಮರ್ಪಿಸುವುದರ ಜತೆಗೆ ಸ್ವಾತಂತ್ರ್ಯ ಉಳಿಸಿಕೊಂಡು ಬರುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಸಾಧಕರಾದ ಲಿಂಗು ಪಾಣಾರ ಎರ್ವಾಳು, ಗುರುರಾಜ ಭಟ್ ಉಳಿಯಾರಗೋಳಿ, ಗೋಪಾಲ ಪೂಜಾರಿ ಪಲಿವಾರು, ವಿನ್ನಿ ಗೋನ್ಸ್ ಸಾಲಿನ್ಸ್ ಪಾಂಬೂರು ಅವರನ್ನು ಗೌರವಿಸಲಾಯಿತು.
ವಾಜಿ ಶಾಸಕ ಲಾಲಾಜಿ ಆರ್.ಮೆಂಡನ್, ಕಾಪು ಪುರಸಭೆ ಅಧ್ಯಕ್ಷೆ ಹರಿಣಾಕ್ಷಿ ದೇವಾಡಿಗ, ಮುಖ್ಯಾಧಿಕಾರಿ ನಾಗರಾಜ್, ಕಾಪು ಪೊಲೀಸ್ ವೃತ್ತ ನಿರೀಕ್ಷಕಿ ಜಯಶ್ರೀ ಎಸ್.ವಾನೆ, ಪ್ರಮುಖರಾದ ನವೀನಚಂದ್ರ ಸುವರ್ಣ, ಪುಂಡಲೀಕ ಮರಾಠೆ, ಬಸವರಾಜು, ಗೋಪಾಲಕೃಷ್ಣ ಗಾಂವ್ಕರ್, ಜೇಮ್ಸ್ ಡಿಸಿಲ್ವ, ಅರುಣ್ ಶೆಟ್ಟಿ ಪಾದೂರು, ಅನಿಲ್‌ಕುವಾರ್, ನಾಗೇಶ್, ಸರಿತಾ ಪೂಜಾರಿ, ಶೋಭಾ ಬಂಗೇರ, ಅಮೀರ್ ಮೊಹಮ್ಮದ್, ಸತೀಶ್‌ಚಂದ್ರ ಮೂಳೂರು, ಉಮೇಶ್ ಕರ್ಕೇರ, ಮಹಮ್ಮದ್ ಆಸಿಫ್, ವಿದ್ಯಾಲತಾ ಸುವರ್ಣ, ಬಾಬಣ್ಣ ನಾಯಕ್, ದೇವರಾಜ್ ಕೋಟ್ಯಾನ್ ಉಪಸ್ಥಿತರಿದ್ದರು.
ಯುವಜನ ಮತ್ತು ಕ್ರೀಡಾ ಅಧಿಕಾರಿ ರಿತೇಶ್ ಶೆಟ್ಟಿ ಸೂಡ ಸ್ವಾಗತಿಸಿದರು. ಶ್ರೀನಿವಾಸ ಆರ್.ಡಿ. ವಂದಿಸಿದರು.