ಜಿಲ್ಲೆ

ಸ್ವಾಮಿ ವಿವೇಕಾನಂದರ ಆದರ್ಶ ಪಾಲಿಸಲಿ

ಕೊಳವಿ: ಪ್ರತಿಯೊಬ್ಬರು ಸ್ವಾಮಿ ವಿವೇಕಾನಂದರ ತತ್ತ$್ವ ಸಿದ್ಧಾಂತ ಹಾಗೂ ಆದರ್ಶ ಮೌಲ್ಯಗಳನ್ನು ಅಳವಡಿಸಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಗ್ರಂಥಪಾಲಕಿ ಮಲ್ಲವ್ವ ಪಾಟೀಲ ಹೇಳಿದರು.

ಸ್ಥಳಿಯ ಗ್ರಾಮ ಪಂಚಾಯಿತಿ ಗ್ರಂಥಾಲಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಪಠ್ಯದ ಜತೆಗೆ ವಿದ್ಯಾರ್ಥಿಗಳು ದಿನಪತ್ರಿಕೆ ಹಾಗೂ ಪುಸ್ತಕ ಓದುವ ಹವ್ಯಾಸ ರೂಢಿಸಿಕೊಂಡು ಜ್ಞಾನ ಹಾಗೂ ಕ್ರಿಯಾಶೀಲತೆ ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಸ್ವಾಮಿ ವಿವೇಕಾನಂದರ ವೇಷಭೂಷಣ ಧರಿಸಿ ವಿದ್ಯಾರ್ಥಿಗಳು ಗಮನ ಸೆಳೆದರು. ಮುಖ್ಯಶಿಕ ಎಲ್​.ಎಸ್​.ಸಿಂಗಾಡಿ, ಶಿಕ್ಷಕರಾದ ಲಕ್ಷಿ$್ಮ ಕೋಮನ್ನವರ, ಎಸ್​.ಬಿ.ತುಪ್ಪದ, ಜಿ.ಐ.ಜಂಬಗಿ, ಬಿ.ಜಿ.ಆನೆಗುಂದಿ, ಎಲ್​.ಎನ್​.ಸಿದ್ದೇಗೌಡರ, ಎಸ್​.ವಿ.ಕೊಳವಿ, ಎಸ್​.ಎಸ್​. ಮಾಲದಿನ್ನಿ, ಎಲ್​.ಬಿ.ಕುಲಗೂಡು ಇತರರಿದ್ದರು.