ತಾಳಿಕೋಟೆ: ಸರ್ಕಾರ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಹಲವಾರು ಸೌಲಭ್ಯ ನೀಡುತ್ತಿದ್ದು, ಅದರ ಪ್ರಯೋಜನ ಪಡೆದು ಉನ್ನತಮಟ್ಟದ ಸಾಧನೆ ಮಾಡುವಂತಾಗಬೇಕೆಂದು ಶ್ರೀ ಸಂಗಮಾರ್ಯ ವಿದ್ಯಾಸಂಸ್ಥೆ ಅಧ್ಯಕ್ಷ ಎಚ್.ಎಸ್. ಪಾಟೀಲ(ಬಾವೂರ) ಹೇಳಿದರು.
ಪಟ್ಟಣದ ಎಸ್.ಎಸ್. ವಿದ್ಯಾ ಸಂಸ್ಥೆಯ ಶ್ರೀ ಬ್ರಹ್ಮಲಿಂಗೇಶ್ವರ ಪ್ರಾಥಮಿಕ ಶಾಲೆ ಹಾಗೂ ಶ್ರೀ ಸಂಗಮೇಶ್ವರ ಪ್ರೌಢಶಾಲೆ ಮಕ್ಕಳಿಗೆ ಸೋಮವಾರ ಸರ್ಕಾರದ ಪಠ್ಯಪುಸ್ತಕ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಓದಿನಲ್ಲಿ ಆಸಕ್ತಿ ಹೊಂದಬೇಕು. ಇಂದು ನೀಡಿರುವ ಜ್ಞಾನದ ಹೊತ್ತಿಗೆ ನಿಮ್ಮ ಮುಂದಿನ ಭವಿಷ್ಯ ರೂಪಿಸಲು ನಾಂದಿಯಾಗಲಿದೆ. ಶಿಕ್ಷಕರು ಶಾಲೆಯಲ್ಲಿ ಮಾಡುವ ಪಾಠ ಬೋಧನೆಯನ್ನು ಮರು ಅಧ್ಯಯನಕ್ಕಾಗಿ ಪಠ್ಯಗಳನ್ನು ಸರ್ಕಾರ ಸಿದ್ಧಪಡಿಸಿ ನೀಡುತ್ತಿದೆ. ಜತೆಗೆ ಸಂಸ್ಥೆಯಿಂದಲೂ ಮಕ್ಕಳಿಗೆ ಉಚಿತವಾಗಿ ನೋಟ್‌ಬುಕ್‌ಗಳನ್ನು ನೀಡುತ್ತಿದೆ ಎಂದು ತಿಳಿಸಿದರು.
ಎಸ್.ಎಸ್. ವಿದ್ಯಾಸಂಸ್ಥೆ ಕಾರ್ಯದರ್ಶಿ ಸಚಿನ ಪಾಟೀಲ ಮಾತನಾಡಿದರು. 5 ರಿಂದ 10ನೇ ತರಗತಿಯವರೆಗಿನ ಮಕ್ಕಳಿಗೆ ಪಠ್ಯಪುಸ್ತಕ ವಿತರಿಸಲಾಯಿತು.
ಪ್ರೌಢಶಾಲೆ ಶಿಕ್ಷಕ ಎಸ್.ವಿ. ಜಾಮಗೊಂಡಿ ಮಾತನಾಡಿದರು.
ಸಂಸ್ಥೆ ಆಡಳಿತಾಧಿಕಾರಿ ಕಿರಣಗೌಡ ಪಾಟೀಲ, ಪ್ರೌಢಶಾಲೆ ಮುಖ್ಯಸ್ಥ ಅಶೋಕ ಕಟ್ಟಿ, ಪ್ರಾಥಮಿಕ ಶಾಲೆ ಮುಖ್ಯಸ್ಥ ಜೆ.ಎಂ. ಕೊಣ್ಣೂರ, ಸಿಬ್ಬಂದಿ ಬಿ.ಐ. ಹಿರೇಹೊಳಿ, ಎಸ್.ವಿ. ಜಾಮಗೊಂಡಿ, ಎಸ್.ಸಿ. ಗುಡಗುಂಟಿ, ಎಚ್.ಬಿ. ಪಾಟೀಲ, ಎಂ.ಎಸ್. ರಾಯಗೊಂಡ, ಯು.ಎಚ್. ಗಟನೂರ, ಎಸ್.ಎಸ್. ಪಾಟೀಲ, ಎಂ.ಎಸ್. ಬಿರಾದಾರ, ಎಸ್.ಬಿ. ಸಾಸನೂರ ಉಪಸ್ಥಿತರಿದ್ದರು.
ಶಿಕ್ಷಕ ಬಿ.ಐ. ಹಿರೇಹೊಳಿ ನಿರೂಪಿಸಿ, ವಂದಿಸಿದರು.