ಜಿಲ್ಲೆ

ಕುರಿಗಾಹಿಗಳಿಗೆ ಸೂಕ್ತ ಭದ್ರತೆ ನೀಡಲಿ

ಎಂ.ಎಸ್​.ಹಿರೇಮಠ ಬೆಳಗಾವಿ

ರಾಮದುರ್ಗ: ರಾಜ್ಯದಲ್ಲೆಡೆ ಕುರಿಗಾಹಿ ಮತ್ತು ಸಮುದಾಯದ ಮೇಲಿನ ದೌರ್ಜನ್ಯ ಪ್ರಕರಣ ಹೆಚ್ಚುತ್ತಿದ್ದು, ತಪ್ಪಿತಸ್ಥರ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೇವಾ ಸಮಿತಿಯ ತಾಲೂಕು ಟಕದ ವತಿಯಿಂದ ಪಟ್ಟಣದಲ್ಲಿ ತಹಸೀಲ್ದಾರ್​ ಮುಖ್ಯಮಂತ್ರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.

ಈಚೆನ ದಿನಗಳಲ್ಲಿ ರಾಜ್ಯದಲ್ಲಿ ಕುರಿಗಾಹಿ ಮತ್ತು ಸಮುದಾಯದ ಮೇಲೆ ದೌರ್ಜನ್ಯ, ಬಹಿಷ್ಕಾರ ಪ್ರಕರಣ ಹೆಚ್ಚುತ್ತಿವೆ. ಹೀಗಾಗಿ, ಸಮುದಾಯದ ಜನರಿಗೆ ಸೂಕ್ತ ಭದ್ರತೆ ಜತೆಗೆ ಕುರಿಗಾಹಿಗಳಿಗೆ ಬಂದೂಕು ಲೈಸನ್ಸ್​ ನೀಡಬೇಕು. ಹತ್ಯೆಗೊಳಗಾದ ಕುರಿಗಾಹಿಗಳ ಕುಟುಂಬಸ್ಥರಿಗೆ ನ್ಯಾಯ ಒದಗಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ತಾಲೂಕಾಧ್ಯ ನಿಂಗಪ್ಪ ಕರಿಗಾರ, ಉಪಾಧ್ಯ ಬಸಪ್ಪ ಹಾಗನೂರ, ಸಹ ಕಾರ್ಯದರ್ಶಿ ಕರೆಪ್ಪ ವಡೆಕನವರ, ಭೀಮಪ್ಪ ಕಟ್ಟೆಕಾರ, ವಿಠ್ಠಲ ಕಾಟಗಾರ, ಎನ್​.ಎಸ್​.ಕಳಸದ, ವಿ.ಟಿ.ಪಾಟೀಲ, ಬಿ.ಎನ್​.ನರಗುಂದ, ಎಂ.ಎಂ.ಮೆಟಗುಡ್ಡ, ಹನುಮಂತ ಪೂಜಾರ, ಅಖಂಡಪ್ಪ ವಡೆಯರ, ಪರಿಯನಗೌಡ ಪಾಟೀಲ ಇತರರಿದ್ದರು.