ಕಂಪ್ಲಿ: ಮೊಹರಂ ಭಾವೈಕ್ಯತೆಯಿಂದ ಆಚರಿಸಬೇಕು ಎಂದು ಇನ್‌ಸ್ಪೆಕ್ಟರ್ ಕೆ.ಬಿ.ವಾಸುಕುಮಾರ್ ಹೇಳಿದರು.
ಇದನ್ನೂ ಓದಿ: ಮೊಹರಂ ಆಚರಣೆಗೆ ಮೂಲಸೌಕರ್ಯ ಕಲ್ಪಿಸಿ
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮಂಗಳವಾರ ನಡೆದ ಮೊಹರಂ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮೊಹರಂ ಹಿಂದು-ಮುಸ್ಲಿಮರು ಸೇರಿ ಆಚರಿಸುತ್ತಿದ್ದು, ಸರ್ವರೂ ಶಾಂತಿ, ಸುವ್ಯವಸ್ಥೆ ಕಾಪಾಡಬೇಕು. ಯುವಕರ ಚಟುವಟಿಕೆಗಳ ಮೇಲೆ ನಿಗಾ ವಹಿಸಿ ಯಾವುದೇ ಅಹಿತಕರ ಘಟನೆಗಳಾಗದಂತೆ ಎರಡೂ ಸಮುದಾಯಗಳ ನಾಯಕರು ಮುತುವರ್ಜಿ ವಹಿಸಬೇಕು. ಪರಿಸರಕ್ಕೆ ತೊಂದರೆಯಾಗದಂತೆ ಹಬ್ಬ ಆಚರಿಸುವಂತೆ ಸಲಹೆ ನೀಡಿದರು.
ವೀರಶೈವ ಸಂಘದ ತಾಲೂಕು ಅಧ್ಯಕ್ಷ ಪಿ.ಮೂಕಯ್ಯಸ್ವಾಮಿ ಮಾತನಾಡಿ, ಕೆಂಡ ತುಳಿಯಲು ಅಲಾಯಿ ಕುಣಿಗೆ ಮರಗಳನ್ನು ಕಡಿಯಬಾರದು. ಭಕ್ತರು ಪಟ್ಟಿ ಮೂಲಕ ಸಂಗ್ರಹಿಸಿದ ಹಣ ಬಳಸಿ ಕಟ್ಟಿಗೆ ಖರೀದಿಸಿ ಅಲಾಯಿ ಕುಣಿಗೆ ಬಳಸಬೇಕು ಎಂದರು. ಪಿಎಸ್‌ಐ ಅವಿನಾಶ್ ಕಾಂಬ್ಳೆ, ಪ್ರಮುಖರಾದ ಕರೇಕಲ್ ಮನೋಹರ, ಹಬೀಬ್ ರೆಹಮಾನ್, ಕೆ.ಷಣ್ಮುಖ, ಬಿ.ಸಿದ್ದಪ್ಪ, ಉಸ್ಮಾನ್, ಟಿ.ವಿ.ಸುದರ್ಶನ ರೆಡ್ಡಿ, ಮುರಳಿಮೋಹನ ರೆಡ್ಡಿ ಇತರರಿದ್ದರು.