ಮುನವಳ್ಳಿ: ಜನಸಾಮಾನ್ಯರ ಆರೋಗ್ಯ ದೃಷ್ಟಿಯಿಂದ ತುರ್ತು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ರಾಜ್ಯ ಸರ್ಕಾರ ಜನವಸತಿ ಇರುವಲ್ಲಿಯೇ ನಮ್ಮ ಕ್ಲಿನಿಕ್ ಪ್ರಾರಂಭಿಸಿದ್ದು, ಸದುಪಯೋಗ ಪಡೆಯಬೇಕು ಎಂದು ಶಾಸಕ ವಿಶ್ವಾಸ ವೆದ್ಯ ಹೇಳಿದರು.
ಪಟ್ಟಣದ ಬಜಾರ್ ಪೇಟೆಯಲ್ಲಿ ಭಾನುವಾರ ರಾಜ್ಯ ಸರ್ಕಾರದಿಂದ ಪ್ರಾರಂಭಿಸಲಾದ ನಮ್ಮ ಕ್ಲಿನಿಕ್ ಉದ್ಘಾಟಿಸಿ ಮಾತನಾಡಿದರು. ನಮ್ಮ ಕ್ಲಿನಿಕ್ನಿಂದ ಖಾಸಗಿ ಆಸ್ಪತ್ರೆಗಳಿಗೆ ಹೋಗಲಾಗದವರಿಗೆ ಸಹಾಯವಾಗುತ್ತದೆ. ಅಲ್ಲಿ ಗರ್ಭಿಣಿಯರ ತಪಾಸಣೆ ಮತ್ತು ಆರೆಕೆ, ಕುಟುಂಬ ನಿಯಂತ್ರಣ, ಸೋಂಕು ರೋಗಗಳ ನಿರ್ವಹಣೆ ಸೇರಿ ವಿವಿಧ ವೆದ್ಯಕಿಯ ಚಿಕಿತ್ಸೆ ನೀಡಲಾಗುತ್ತದೆ ಎಂದರು.
ಸವದತ್ತಿ ಟಿಎಪಿಸಿಎಂಎಸ್ ಅಧ್ಯ ರವೀಂದ್ರ ಯಲಿಗಾರ, ಕಾಂಗ್ರೆಸ್ ಮುಖಂಡ ಸೋಮಶೇಖರ ಯಲಿಗಾರ, ಪುರಸಭೆ ಅಧ್ಯ ಸಿ.ಬಿ.ಬಾಳಿ, ಸವದತ್ತಿ ಎಪಿಎಂಸಿ ಅಧ್ಯ ಚಂದ್ರು ಪೂಜೇರ,ಮುಖಂಡರಾದ ಎಂ.ಆರ್.ಗೋಪಶೆಟ್ಟಿ, ಗಜಾನನ ಕಲಾಲ, ಕಲ್ಲಪ್ಪ ಕಿತ್ತೂರ, ಮುಬಾರಕ್ ಬೆರಕದಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಐ.ಸಿ.ಗಡಾದ, ತಾಲೂಕು ಆರೋಗ್ಯಾಧಿಕಾರಿ ಶ್ರೀಪಾದ ಸಬನೀಸ್, ಪುರಸಭೆ ಮುಖ್ಯಾಧಿಕಾರಿ ಮಹೇಂದ್ರ ತಿಮ್ಮಾಣಿ, ಡಾ.ಎಸ್.ಎಲ್. ದಂಡಗಿ, ಅಶೋಕ ಮುರಗೋಡ, ಶಂಕರ ನಾಯ್ಕ, ಭುವನೇಶ್ವರಿ, ನೀಲಮ್ಮ ಪಾಟೀಲ, ಗೀತಾ ಹೊಂಗಲ, ಜಿ.ಎಲ್.ಭಂಡಾರಿ, ವಿಶ್ವಾಸ ಹಿರೇಮಠ, ಸುಭಾಸ ಹುಜರತ್ತಿ, ಪುರಸಭೆಯ ಉಪಾಧ್ಯ, ಸದಸ್ಯರು, ಪುರಸಭೆ ಹಾಗೂ ಸಿಬ್ಬಂದಿ ಇತರರಿದ್ದರು.