ಜಿಲ್ಲೆ

ದೇಶಾಭಿವೃದ್ಧಿಗೆ ಸಾಕ್ಷರತೆ ಪೂರಕವಾಗಲಿ

ರಾಘವೇಂದ್ರಗೌಡ ಭೀ ಪಾಟೀಲ್

ತಲ್ಲೂರ: ದೇಶದ ಅಭಿವೃದ್ಧಿಯಲ್ಲಿ ಸಾಕ್ಷರತೆ ಪ್ರಮುಖ ಪಾತ್ರ ವಹಿಸುವುದರಿಂದ ಪ್ರತಿಯೊಬ್ಬರೂ ಸಾಕ್ಷರರಾಗಬೇಕು ಎಂದು ಕ್ಷೇತ್ರ ಸಮನ್ವಯಾಧಿಕಾರಿ ಬಿ.ಎನ್.ಬ್ಯಾಳಿ ಹೇಳಿದರು.

ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಸವದತ್ತಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಿಆರ್‌ಪಿ ಗುರುದೇವಿ ಮಲಕನ್ನವರ ಮಾತನಾಡಿದರು.

ಬಿಇಒ ಎ.ಎ.ಖಾಜಿ, ತಾಪಂ ಮಾಜಿ ಅಧ್ಯಕ್ಷ ವಿನಯಕುಮಾರ ದೇಸಾಯಿ, ಬಾಬುಗೌಡ ಅಣ್ಣಿಗೇರಿ, ಎಂ.ಬಿ.ಕೊಪ್ಪದ, ಡಿ.ಡಿ.ಭೋವಿ, ಎಲ್.ಕೆ.ಪೂಜೆರ, ಎಸ್.ಎ್.ಮುರಗನ್ನವರ, ಎಸ್.ಎಂ.ಹಂಜಿ, ಮಲ್ಲಿಕಾರ್ಜುನ ಬದಾಮಿ, ಎ.ವಿ.ಇಂಗಳೆ, ಯು.ಎಲ್.ಜರಗು, ಎಚ್.ವೈ.ಮಾದರ, ಶಿವಾನಂದ ಅಣ್ಣಿಗೇರಿ, ಎಸ್.ಬಿ.ಪವಾಡೆಪ್ಪನವರ, ಎಸ್.ಎನ್.ಪಾಶ್ವಾಪುರ, ಇತರರಿದ್ದರು.