ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ವಾಲ್ಮೀಕಿ ಜಯಂತಿ ಸಮಾರಂಭದಲ್ಲಿ ಪಂಚಾಯಿತಿ ಅಧ್ಯಕ್ಷೆ ಜಯಂತಿ ಶಿವಕುಮಾರ್ ಪುಷ್ಪನಮನ ಸಲ್ಲಿಸಿದರು. ಮೋಹಿನಿ, ಕೃಷ್ಣಪ್ರಸಾದ್ ಇದ್ದರು. 
ಜಿಲ್ಲೆ

ವಾಲ್ಮೀಕಿ ನೆನೆಯುವ ಕೆಲಸವಾಗಲಿ

ಸೋಮವಾರಪೇಟೆ: ದೈವಭಾಷೆಯೆಂದು ಕರೆಯಲ್ಪಡುವ ಸಂಸ್ಕೃತವನ್ನು ಕರಗತ ಮಾಡಿಕೊಂಡು ಕಾವ್ಯ ಪ್ರಕಾರದಲ್ಲಿ ಬರೆದ ವಾಲ್ಮೀಕಿಯ ವಿದ್ವತ್ತಿಗೆ ಗೌರವ ಕೊಡಲೇಬೇಕಾಗಿದೆ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜಯಂತಿ ಶಿವಕುಮಾರ್ ಅಭಿಪ್ರಾಯಿಸಿದರು.

ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ವಾಲ್ಮೀಕಿ ಜಯಂತಿ ಸಮಾರಂಭದಲ್ಲಿ ಮಾತನಾಡಿ, ರಾಮಾಯಣದಂತೆ ನಿತ್ಯ ಸ್ಮರಣೆಯನ್ನಾಗಿ ನಾವು ವಾಲ್ಮೀಕಿಯನ್ನು ನೆನಪಿಸಿಕೊಳ್ಳಬೇಕು ಎಂದರು.

ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಮೋಹಿನಿ, ಸದಸ್ಯರಾದ ಶೀಲಾ ಡಿಸೋಜ, ಮೃತ್ಯುಂಜಯ, ಜೀವನ್, ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ಇದ್ದರು.