ನವಲಗುಂದ: ಪಹಲ್ಗಾಮ್ಲ್ಲಿ ಪ್ರವಾಸಿಗರನ್ನು ಕೊಂದ ಪಾಕಿಸ್ತಾನದ ಉಗ್ರರಿಗೆ ಭಾರತೀಯ ಯೋಧರು ತಕ್ಕ ಉತ್ತರ ನೀಡಿದ್ದಾರೆ. ಈ ಮೂಲಕ ಜಗತ್ತಿಗೆ ಸ್ಪಷ್ಟ ಸಂದೇಶ ಮತ್ತು ಎಚ್ಚರಿಕೆಯನ್ನೂ ನೀಡಿದ್ದಾರೆ ಎಂದು ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.
ಆಪರೇಷನ್ ಸಿಂಧೂರ ಕಾರ್ಯಾಚರಣೆ ನಂತರ ದೇಶದ ಸೈನಿಕರ ಆತ್ಮಸ್ಥೈರ್ಯ ಹೆಚ್ಚಿಸುವ ಸಲುವಾಗಿ ಪಟ್ಟಣದ ಗಣಪತಿ ದೇವಸ್ಥಾನದಿಂದ ಪ್ರಮುಖ ಬೀದಿಗಳಲ್ಲಿ ಆಯೋಜಿಸಿದ್ದ ಬೃಹತ್ ತಿರಂಗಾ ಯಾತ್ರೆಯಲ್ಲಿ ಅವರು ಮಾತನಾಡಿದರು. ಭಯೋತ್ಪಾದಕರ ಹುಟ್ಟಡಗಿಸಲು, ರಾಷ್ಟ್ರದ ರಕ್ಷಣೆಗೆ ಟೊಂಕ ಕಟ್ಟಿ ನಿಂತವರು ನಮ್ಮ ಹೆಮ್ಮೆಯ ಸೈನಿಕರು. ಅವರಿಗೆ ಪ್ರತಿಯೊಬ್ಬರೂ ಗೌರವ ಸಲ್ಲಿಸಬೇಕು. ಈ ಹಿನ್ನೆಲೆಯಲ್ಲಿ ತಿರಂಗಾ ಯಾತ್ರೆ ನಡೆಸುವ ಮೂಲಕ ಯೋಧರನ್ನು ಅಭಿನಂದಿಸುತ್ತಿದ್ದೇವೆ ಎಂದರು.
ಬೃಹತ್ ರಾಷ್ಟ ಧ್ವಜ ಹಿಡಿದು ವಿದ್ಯಾರ್ಥಿಗಳು, ಸಾರ್ವಜನಿಕರು, ಸೈನಿಕರು ಹಾಗೂ ಮಾಜಿ ಸೈನಿಕರು ಮೆರವಣಿಗೆಯಲ್ಲಿ ಸಾಗಿದರು.
ನಿಂಗಪ್ಪ ಸುತಗಟ್ಟಿ, ಗಂಗಪ್ಪ ಮನಮಿ, ಷಣ್ಮುಖ ಗುರಿಕಾರ, ಸುರೇಶ ಗಾಣಿಗೇರ, ರಾಜಶೇಖರ ಕಂಪ್ಲಿ, ಶರಣಪ್ಪಗೌಡ ದಾನಪ್ಪಗೌಡ್ರ, ಶಂಕ್ರು ತೋಟದ, ಶ್ರೀಶೈಲ ಮೂಲಿಮನಿ, ಪ್ರಕಾಶ ಅಂಗಡಿ, ಅಣ್ಣಪ್ಪ ಬಾಗಿ, ಸುಭಾಸಚಂದ್ರಗೌಡ ಪಾಟೀಲ, ದೇವರಾಜ ದಾಡಿಬಾವಿ, ಸಿದ್ಧನಗೌಡ ಪಾಟೀಲ, ಶಂಭು ಮೆಣಸಿನಕಾಯಿ, ಸಾಯಿಬಾಬಾ ಆನೇಗುಂದಿ, ಮಲ್ಲಿಕಾರ್ಜುನ ಸಂಗನಗೌಡ್ರ, ಶಿವು ಹೊಸಳ್ಳಿ, ಮಂಜುನಾಥ ಗಡಿಯಣ್ಣನವರ, ಆನಂದ ಚವಡಿ, ಅರುಣಕುಮಾರ ಮೆಣಸಿನಕಾಯಿ, ಮಂಜು ಗಣಿ, ಬಸವರಾಜ ಕಾತರಕಿ, ಮುತ್ತು ಕೊಳ್ಳಿ, ರೋಹಿತ ಮತ್ತಿಹಳ್ಳಿ, ಸೋಮು ಪಟ್ಟಣಶೆಟ್ಟಿ, ಶಂಕರಗೌಡ ರಾಯಗೌಡ್ರ, ಮುತ್ತು ಚಾಕಲಬ್ಬಿ, ಮೃತ್ಯುಂಜಯ ದಿಂಡಿ, ಗಿರೀಶ ಲಕ್ಕುಂಡಿ, ದುಂಡಪ್ಪ ಶೆಟ್ಟರ, ಮಲ್ಲಿಕಾರ್ಜುನ ಮುಗಳಿ, ಶರಣು ಹಕ್ಕರಕಿ, ಅಭಿನಂದನ ಜೈನರ್, ದೇವರಾಜ ಕರಿಯಪ್ಪನವರ, ರಾಜುಗೌಡ ಪಾಟೀಲ, ವೀರೇಶ ಅಂಗಡಿ, ಶ್ರೀನಿವಾಸ ಮಾವಿನಕಾಯಿ, ಮಲ್ಲಿಕಾರ್ಜುನ ಹೂಲಿ, ದುರ್ಗಪ್ಪ ಬೆಳವಟಿಗಿ, ಕೃಷ್ಣ ಮಾದರ, ಕಲ್ಲಪ್ಪ ಮಾದರ, ಯಲ್ಲಪ್ಪ ದುಂದೂರ, ಜಯಪ್ರಕಾಶ ಬದಾಮಿ, ಇತರರಿದ್ದರು.