ಜಿಲ್ಲೆ

ರೈತರಿಗೆ ಹೆಚ್ಚು ಕಬ್ಬು ಇಳುವರಿ ಸಿಗುವಂತಾಗಲಿ

ಎಂ.ಎಸ್​.ಹಿರೇಮಠ ಬೆಳಗಾವಿ

ಬೈಲಹೊಂಗಲ: ಹನಿ ನೀರಾವರಿ ಮೂಲಕ ಸಾವಯವ ಗೊಬ್ಬರ ಉಪಯೋಗಿಸಿ ಎಕರೆಗೆ 100 ರಿಂದ 150 ಟನ್​ ಕಬ್ಬು ಬೆಳೆಯಬಹುದು. ಆ ನಿಟ್ಟಿನಲ್ಲಿ ರೆತರಿಗೆ ಇನಾಮದಾರ ಸಕ್ಕರೆ ಕಾರ್ಖಾನೆಯಿಂದ ಎಲ್ಲ ರೀತಿಯ ಸಹಕಾರ ಮತ್ತು ಸಲಹೆ ನೀಡಲಾಗುವುದು ಎಂದು ಕಾರ್ಖಾನೆ ನಿರ್ದೇಶಕ ಜಯರಾಜ ಮೆಟಗುಡ್ಡ ಹೇಳಿದರು.

ನಗರದ ವಿಜಯ ಸೋಷಿಯಲ್​ ಕ್ಲಬ್​ನಲ್ಲಿ ಇನಾಮದಾರ ಶುಗರ್ಸ್​ ಲಿಮಿಟೆಡ್​ ಮರಕುಂಬಿ ಹಾಗೂ ಜೈನ್​ ಇರಿಗೇಷನ್​ ಸಿಸ್ಟಮ್​ ಆಶ್ರಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಸಮಗ್ರ ಬೇಸಾಯ ಕ್ರಮಗಳ ಕುರಿತ ಕಾರ್ಯಾಗಾರದಲ್ಲಿ ಅಧ್ಯತೆ ವಹಿಸಿ ಮಾತನಾಡಿ, ರೆತರ ಅಭಿವೃದ್ಧಿಗಾಗಿ ಕಾರ್ಖಾನೆಯಿಂದ ವಿವಿಧ ಯೋಜನೆ ಹಮ್ಮಿಕೊಳ್ಳಲಾಗುತ್ತಿದ್ದು, ಸದುಪಯೋಗ ಪಡೆಯಬೇಕು ಎಂದರು.

ಕೃಷಿರತ್ನ ಪ್ರಶಸ್ತಿ ವಿಜೇತ ಡಾ.ಸಂಜೀವ ಮಾನೆ ಮಾತನಾಡಿ, ಕಬ್ಬಿನ ಇಳುವರಿ ಹೆಚ್ಚಿಸುವಲ್ಲಿ ಕಬ್ಬು ನಾಟಿ ಪದ್ಧತಿ ಮತ್ತು ಗೊಬ್ಬರ ಪಾತ್ರದ ಕುರಿತು ಸಮಗ್ರ ಮಾಹಿತಿ ನೀಡಿದರು. ಹಿರಿಯ ಕಬ್ಬು ವಿಜ್ಞಾನಿ ವಿಜಯ ಮಾಳಿ, ಕಾರ್ಖಾನೆಯ ಕಬ್ಬು ವಿಭಾಗದ ಮುಖ್ಯಸ್ಥ ಬಿ.ಎ.ಶೇಗುಣಸಿ, ಸಿವಿಲ್​ ವಿಭಾಗದ ಮುಖ್ಯಸ್ಥ ಎ.ಕೆ.ಪಾಟೀಲ ಮಾತನಾಡಿ, ನಮ್ಮ ಭಾಗದ ರೆತರು ಸಮಾಜಕ್ಕೆ ಮಾದರಿಯಾಗುವ ನಿಟ್ಟಿನಲ್ಲಿ ಕಬ್ಬು ಬೆಳೆಯಬೇಕು ಎಂದರು. ಸಿದ್ಧಾರೂಢ ಸ್ವಾಮಿ ನೀರು ಬಳಕೆದಾರರ ಸಂದ ಅಧ್ಯ ಬಸವರಾಜ ನರಸನ್ನವರ, ಸಂದ ಪದಾಧಿಕಾರಿಗಳು, ಕಾರ್ಖಾನೆ ಅಧಿಕಾರಿಗಳು, ಬೆಳೆಗಾರರು ಇತರರಿದ್ದರು.