ಮುಷ್ಟೂರಿನಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಶಾಸಕಿ ಕರೆಮ್ಮ ಜಿ. ನಾಯಕ ಶುಕ್ರವಾರ ಚಾಲನೆ ನೀಡಿದರು. ಗ್ರಾಪಂ ಅಧ್ಯಕ್ಷ ಧನಂಜಯ್ಯ, ಡಿಡಿಪಿಐ ಕೆ.ಡಿ. ಬಡಿಗೇರ, ಬಿಇಒ ಪಿ.ಮಹದೇವಯ್ಯ, ಅರಕೇರಾ ಇಒ ಅಣ್ಣಾರಾವ್ ನಾಯಕ ಇತರರಿದ್ದರು. 
ಜಿಲ್ಲೆ

ಪಠ್ಯೇತರ ಚಟುವಟಿಕೆಗೂ ಸಿಗಲಿ ಪ್ರೋತ್ಸಾಹ

ನರೇಶ್ ಕುಮಾರ್

ಅರಕೇರಾ: ಯುವ ಜನತೆ ದುಶ್ಚಟಗಳಿಗೆ ದಾಸರಾಗದೆ, ದೈಹಿಕ ಮತ್ತು ಮಾನಸಿಕ ಸಾಮರ್ಥ್ಯಕ್ಕೆ ಶಕ್ತಿ ತುಂಬಲು ಕ್ರೀಡಾಕೂಟಗಳತ್ತ ಗಮನಹರಿಸಬೇಕು ಎಂದು ಶಾಸಕಿ ಕರೆಮ್ಮ ಜಿ. ನಾಯಕ ಹೇಳಿದರು.

ತಾಲೂಕಿನ ಮುಷ್ಟೂರು ಗ್ರಾಮದಲ್ಲಿ ಜಿಲ್ಲಾಡಳಿತ, ಜಿಪಂ, ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಿದ್ದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಕ್ರೀಡಾಕೂಟ ಉದ್ಘಾಟಿಸಿ ಶುಕ್ರವಾರ ಮಾತನಾಡಿದರು.

ಆಧುನಿಕ ಭರಾಟೆಯಲ್ಲಿ ಯುವಜನರ ಜೀವನ ಶೈಲಿ ಬದಲಾಗಿದೆ. ಪುಸ್ತಕ, ಪೆನ್ನುಗಳು ಹಿಡಿಯಬೇಕಾದ ಕೈಗಳಲ್ಲಿ ನಿರಂತರ ಮೊಬೈಲ್ ಇರುತ್ತದೆ. ವ್ಯಕ್ತಿತ್ವ ವಿಕಸನ ಅಭಿವೃದ್ಧಿಗೆ ಶ್ರಮಿಸಬೇಕು. ಶಿಕ್ಷಕರು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಿಗೂ ಪ್ರೋತ್ಸಾಹಿಸಬೇಕು ಎಂದರು.

ಡಿಡಿಪಿಐ ಕೆ.ಡಿ.ಬಡಿಗೇರ ಮಾತನಾಡಿ, ದೇಶೀಯ ಕ್ರೀಡೆಗಳಲ್ಲಿ ಮನುಷ್ಯನ ಸಾಮರ್ಥ್ಯ ಪರೀಕ್ಷಿಸಲು ಸಹಕಾರಿಯಾಗುತ್ತದೆ. ಪ್ರಾಚೀನ ಕಾಲದಿಂದಲೂ ಕ್ರೀಡೆಗಳಿಗೆ ಮಹತ್ವ ಇದೆ. ದೈಹಿಕ ಮತ್ತು ಮಾನಸಿಕ ಸದೃಢತೆಗೆ ಪ್ರತಿಯೊಬ್ಬರೂ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಬೇಕು. ಸೋತಾಗ ಹತಾಶರಾಗದೆ ಮುಂದಿನ ಸಲ ಗೆಲ್ಲುವತ್ತ ಗಮನಹರಿಸಬೇಕು ಎಂದು ಸಲಹೆ ನೀಡಿದರು.

ಗ್ರಾಪಂ ಅಧ್ಯಕ್ಷ ಧನಂಜಯ, ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಮಹದೇವಯ್ಯ, ಅರಕೇರಾ ಇಒ ಅಣ್ಣಾರಾವ್ ನಾಯಕ, ದೇವದುರ್ಗ ಇಒ ಬಸವರಾಜ ಹಟ್ಟಿ, ದೈಹಿಕ ಶಿಕ್ಷಣ ಅಧಿಕಾರಿ ರಂಗಸ್ವಾಮಿ, ಕ್ಷೇತ್ರ ಸಮನ್ವಯ ಅಧಿಕಾರಿ ಶಿವರಾಜ ಪೂಜಾರಿ, ಅಕ್ಷರ ದಾಸೋಹ ಅಧಿಕಾರಿ ಬಸವರಾಜ ಕಟ್ಟಿಮನಿ, ತಾಲೂಕು ದೆಹಿಕ ಶಿಕ್ಷಣ ಅಧಿಕಾರಿ ಎಂ.ವಿ.ಕವಡಿಮಟ್ಟಿ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಹನುಮಂತ್ರಾಯ ಶಾಖೆ, ತಾಪಂ ಮಾಜಿ ಸದಸ್ಯ ಗೋವಿಂದರಾಜ ನಾಯಕ, ಪಿಎಸೈ ಅರುಣ ಕುಮಾರ, ಸಿಆರ್‌ಪಿ ಬಸ್ಸಯ್ಯ ಸಾತಲ್ ಇತರರಿದ್ದರು.