ಜಿಲ್ಲೆ

ಎಲ್ಲರೂ ಚನ್ನಮ್ಮನ ಸಾಧನೆ ಅರಿತುಕೊಳ್ಳಲಿ

ರಾಮದುರ್ಗ: ಬ್ರಿಟಿಷರೊಡನೆ ಹೋರಾಡಿದ ವೀರ ಮಹಿಳೆ ಕಿತ್ತೂರು ರಾಣಿ ಚನ್ನಮ್ಮನ ಸಾಧನೆಯನ್ನು ಯುವಪೀಳಿಗೆ ಅರಿತುಕೊಳ್ಳಬೇಕೆಂದು ಸರ್ಕಾರಿ ಪ್ರಥಮದರ್ಜೆ ಕಾಲೇಜ್​ ಉಪನ್ಯಾಸಕ ಡಾ.ಅಪ್ಪಣ್ಣ ವಗ್ಗರ ತಿಳಿಸಿದರು.

ಪಟ್ಟಣದ ವಿದ್ಯಾ ಪ್ರಸಾರಕ ಸಮಿತಿಯ ಸಿ.ಎಸ್​.ಬೆಂಬಳಗಿ ಕಲಾ, ಶಾ.ಎಂ.ಆರ್​.ಪಾಲರೇಶಾ ವಿಜ್ಞಾನ ಹಾಗೂ ಜಿ.ಎಲ್​.ರಾಠಿ ವಾಣಿಜ್ಯ ಮಹಾವಿದ್ಯಾಲಯದಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ರಾಣಿ ಚನ್ನಮ್ಮ ಅಧ್ಯಯನ ಪೀಠ ಹಾಗೂ ಇತಿಹಾಸ ವಿಭಾಗದ ಸಂಯುಕ್ತಾಶ್ರಯದಲ್ಲಿ ಕಿತ್ತೂರು ಹೋರಾಟದ ಪುನರ್​ ಅವಲೋಕನ ಕುರಿತು ಈಚೆಗೆ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಣಿ ಚನ್ನಮ್ಮ ಅಧ್ಯಯನ ಪೀಠದ ನಿರ್ದೇಶಕಿ ಡಾ.ನಾಗರತ್ನಾ ಪರಾಂಡೆ, ಸಲಹಾ ಸಮಿತಿ ಸದಸ್ಯೆ ರಶ್ಮಿ ಸುತಗಟ್ಟಿ ಮಾತನಾಡಿದರು.

ವಿದ್ಯಾ ಪ್ರಸಾರಕ ಸಮಿತಿ ಅಧ್ಯಕ್ಷ ಪ್ರೋ.ಎಸ್​.ಎಸ್​.ಸುಲ್ತಾನಪುರ ಉದ್ಘಾಟಿಸಿದರು. ಪ್ರಾಚಾರ್ಯ ಡಾ.ಪಿ.ಬಿ.ತೆಗ್ಗಿಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಇತಿಹಾಸ ವಿಭಾಗದ ಮುಖ್ಯಸ್ಥೆ ಎಸ್​.ಬಿ.ಆಲಗುಂಡಿ ಪರಿಚಯಿಸಿದರು. ಮಂಜುಳಾ ಮೂಡ್ಲವರ, ದರ್ಶನ ಪಾಟೀಲ ನಿರೂಪಿಸಿದರು. ಐಕ್ಯೂಎಸಿ ಸಂಯೋಜಕ ಎಸ್​.ಡಿ.ಕಾಮತ ವಂದಿಸಿದರು.