ವಿಜಯಪುರದಲ್ಲಿ ಸುವಿಧಾ ಸಂಸ್ಥೆ ವತಿಯಿಂದ ಸರ್ವಧರ್ಮ ಇಫ್ತಾರ್​ಕೂಟ ನಡೆಯಿತು. ಸಂಗಮೇಶ ಬಬಲೇಶ್ವರ, ಎಂ.ಸಿ. ಮುಲ್ಲಾ, ವೀರುಪಾಕ್ಷ ದೇವರು ಮತ್ತಿತರರಿದ್ದಾರೆ. 
ಜಿಲ್ಲೆ

ಎಲ್ಲರೂ ಸೌಹಾರ್ದಯುತವಾಗಿ ಬಾಳಿ

ಗಿರೀಶ ಸಗರ

ವಿಜಯಪುರ: ಎಲ್ಲರನ್ನು ಪ್ರೀತಿ, ಸೌಹಾರ್ದತೆಯಿಂದ ಕಂಡಾಗಲೇ ನಮಗೆ ಭಗವಂತ ಕಾಣುತ್ತಾನೆ. ಅಲ್ಲಾಹು ಬೇರೆಯಲ್ಲ, ಪರಮಾತ್ಮ ಬೇರೆಯಲ್ಲ ಎಲ್ಲರೂ ಒಂದೇ ಎಂದು ರಾಜ್ಯ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು.

ನಗರದಲ್ಲಿ ಸುವಿಧಾ ಸಾಮಾಜಿಕ ಸೇವಾ ಸಂಸ್ಥೆ ವತಿಯಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ಸರ್ವಧರ್ಮ ಇಫ್ತಾರ್​ ಕೂಟದಲ್ಲಿ ಅವರು ಮಾತನಾಡಿದರು. ನಾವೆಲ್ಲರೂ ಸಮಾಜದಲ್ಲಿ ಸೌಹಾರ್ದತೆಯಿಂದ ಬದುಕಿ ಬಾಳಬೇಕಿದೆ ಎಂದರು.

ನಮ್ಮ ನಾಡು ಸೌಹಾರ್ದತೆಯ ಬೀಡು. ಸೂಫಿ ಸಂತರು, ಬಸವಾದಿ ಶಿವಶರಣರು ನಮಗೆಲ್ಲ ಇಂತಹ ಸಂಸತಿ ನೀಡಿದ್ದಾರೆ. ರಂಜಾನ್​ ಮುಸ್ಲಿಮರ ಪವಿತ್ರ ಹಬ್ಬ. ಉಪವಾಸ ಕೈಗೊಳ್ಳುವ ಮೂಲಕ ದೇವರ ಕೃಪೆಗೆ ಪಾತ್ರರಾಗುತ್ತಾರೆ. ಅದರಂತೆ ಈ ಪವಿತ್ರ ಮಾಸದಲ್ಲಿ ಮಕ್ಕಳಿಗೆ ಧರ್ಮಗ್ರಂಥ ಓದಲು ಮತ್ತು ಪುಸ್ತಕ ಓದುವ ಸಂಸತಿ ಬೆಳೆಸಬೇಕಿದೆ ಎಂದು ಸಲಹೆ ನೀಡಿದರು.

ಸಾನ್ನಿಧ್ಯ ವಹಿಸಿದ್ದ ಯರನಾಳದ ವೀರುಪಾಕ್ಷ ದೇವರು ಹಾಗೂ ಮನಗೂಳಿ ದರ್ಗಾದ ಪೀಠಾಧಿಪತಿ ಡಾ. ಸೈಯ್ಯದ ಫೈರಜ್​ ಹುಸೇನ ಸಾಹೇಬ ಆಶೀರ್ವಚನ ನೀಡಿದರು.

ಮುಖಂಡ ಅಬ್ದುಲ್​ಹಮೀದ್​ ಮುಶ್ರೀಫ್​, ಜಿಲ್ಲಾ ಸಹಕಾರಿ ಯೂನಿಯನ್​ ಅಧ್ಯಕ್ಷ ಎಂ.ಸಿ. ಮುಲ್ಲಾ, ಅಹಿಂದ ಮುಖಂಡ ಎಸ್​.ಎಂ. ಪಾಟೀಲ ಗಣಿಹಾರ, ಮಹ್ಮದ್​ ರಫೀಕ್​ ಟಪಾಲ, ಗಂಗಾಧರ ಸಂಬಣ್ಣಿ, ಅಬ್ದುಲರಜಾಕ್​ ಹೊರ್ತಿ, ಆರದ್​ ಪಟೇಲ್​, ಶಂಕರಗೌಡ ಹಿರೇಗೌಡರ, ರಾಜು ಕಂಬಾಗಿ, ನಾಗರಾಜ ಲಂಬು, ಸಿ.ಎಸ್​. ನಿಂಬಾಳ, ಮೋಯಿನ ಕಲಾದಗಿ, ಪೀರಪಟೇಲ ಪಟೇಲ್​, ಶಕೀಲ ಬಾಗಮಾರೆ, ವಿಜಯಕುಮಾರ ಘಾಟಗೆ, ಮಹಾದೇವ ರಾವಜಿ, ಮದಸ್ಸರ್​ ಖತೀಬ, ಶಬ್ಬೀರ್​ ಪಿತಲಿ, ಅಶ್ಫಾಕ್​ ಮನಗೂಳಿ, ಶಖೀಲ್​ ಗಡೇದ, ಬಂದೇನವಾಜ್​ ಮುಲ್ಲಾ, ಸೋಮಶೇಖರ ಕುರ್ಲೆ, ಸುವಿಧಾ ಸಂಸ್ಥೆ ಸದಸ್ಯ ಎಚ್​.ಎಸ್​. ಕಬಾಡೆ, ಮೊಹ್ಮದ್​ ನಶೀಮ್​ ರೋಜಿಂದಾರ, ಮೊಹ್ಮದ ಸಾಧಿಕ ಜಾನ್ವೇಕರ, ಐ.ಸಿ. ಪಠಾಣ, ಶಫೀಕ ಜಾಗೀರದಾರ, ದಾದಾಪೀರ ಮುಜಾವರ ಇತರರಿದ್ದರು. ಫಯಾಜ್​ ಕಲಾದಗಿ ಸ್ವಾಗತಿಸಿದರು. ದಸ್ತಗಿರ ಸಾಲೋಟಗಿ ನಿರೂಪಿಸಿ, ವಂದಿಸಿದರು.