ನರೇಗಲ್ಲ: ಪ್ರತಿಯೊಬ್ಬರೂ ತಾವು ಕಲಿತ ಶಾಲೆ, ಕಲಿಸಿದ ಗುರುಗಳನ್ನು ಮರೆಯದೆ ಸಂಸ್ಕಾರವಂತರಾಗಿ ಬಾಳಿದರೆ ಅದೇ ನೀವು ಈ ಸಮಾಜಕ್ಕೆ ನೀಡುವ ದೊಡ್ಡ ಕೊಡುಗೆ ಎಂದು ಶ್ರೀ ಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆ ಚೇರ್ಮನ್ ಡಾ. ಜಿ.ಕೆ. ಕಾಳೆ ಹೇಳಿದರು.
ಪಟ್ಟಣದ ಶ್ರೀ ಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆಯ 2025-26ನೇ ಸಾಲಿನ ವಿವಿಧ ಸಾಂಘಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಜೀವನದಲ್ಲಿ ಯಾವುದೇ ಯಶಸ್ಸು ಸುಲಭವಾಗಿ ಒಲಿಯುವುದಿಲ್ಲ. ಅದಕ್ಕೆ ಸತತ ಸಾಧನೆ ಬೇಕು. ಈ ಸಾಧನೆಗೆ ಪರಿಶ್ರಮ, ಶ್ರದ್ಧೆ, ಪ್ರಾಮಾಣಿಕ ಪ್ರಯತ್ನದ ಜೊತೆಗೆ ತಾಳ್ಮೆಯೂ ಬೇಕು. ಒಮ್ಮೆಲೇ ಸಿಕ್ಕ ಯಶಸ್ಸು ಎಂದಿಗೂ ಶಾಶ್ವತವಲ್ಲ ಎಂದರು.
ನಿವೃತ್ತ ಮುಖ್ಯ ಶಿಕ್ಷಕ ಅರುಣ ಕುಲಕರ್ಣಿ ಮಾತನಾಡಿ, ಪ್ರತಿ ವ್ಯಕ್ತಿಯಲ್ಲಿಯೂ ಅಡಗಿರುವ ಕಲೆ, ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸುವ ಕಾರ್ಯವಾಗಬೇಕು. ಸಾಧನೆ ಸಾಧಕನ ಸ್ವತ್ತು ಎಂಬುದನ್ನು ಎಂದಿಗೂ ಮರೆಯಬಾರದು. ಗುರಿ ಈಡೇರುವವರೆಗೂ ಗುರಿಯೆಡೆಗೆ ಸಾಗುತ್ತಿರಬೇಕು ಎಂದರು.
ಸಂಸ್ಥೆಯ ಆಡಳಿತಾಧಿಕಾರಿ ಎನ್.ಆರ್. ಗೌಡರ ಮಾತನಾಡಿದರು. ಉಚಿತ ಪ್ರಸಾದ ನಿಲಯದ ಚೇರ್ಮನ್ ಮಲ್ಲಿಕಾರ್ಜುನಪ್ಪ ಮೆಣಸಗಿ, ಮುಖ್ಯ ಶಿಕ್ಷಕಿ ಬಿ.ಜಿ. ಶಿರ್ಸಿ, ಶಿಕ್ಷಕಿ ಎಂ. ಎಂ. ಶಿಳ್ಳಿನ, ಕೆ.ಐ ಕೋಳಿವಾಡ, ಎಂ.ವಿ ಕಡೆತೋಟದ, ಐ.ಬಿ ಒಂಟೇಲಿ, ಪೂರ್ಣಿಮಾ ಅಂಗಡಿ, ವಿ.ಪಿ ಗ್ರಾಮಪೂರೋಹಿತ, ಎಸ್.ವಿ ಹಿರೇಮಠ, ವಿ.ಎಸ್ ಜಾದವ್, ಎಸ್.ಕೆ ಕುಲಕರ್ಣಿ, ಎಸ್.ಎಚ್. ಮಾನ್ವಿ, ಎಂ.ಎಂ ಸಿಳ್ಳಿನ, ಗೀತಾ ಶಿಂಧೆ, ಎನ್.ಜೆ ಸಂಗನಾಳ, ಜೆ.ವಿ ಕೆರಿಯವರ, ಅಕ್ಕಮಹಾದೇವಿ ಅಯ್ಯನಗೌಡ್ರ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.