Oplus_131072 
ಜಿಲ್ಲೆ

ಎಲ್ಲರೂ ಆರೋಗ್ಯ ಕಾಳಜಿ ಹೊಂದಲಿ

ಎಂ.ಎಸ್​.ಹಿರೇಮಠ ಬೆಳಗಾವಿ

ಮೂಡಲಗಿ: ಆರೋಗ್ಯವೊಂದಿದ್ದರೆ ಜೀವನದಲ್ಲಿ ಏನು ಬೇಕಾದರೂ ಸಾಧಿಸಬಹುದು. ಅನಾರೋಗ್ಯ ಕಾಡುತ್ತಲಿದ್ದರೆ ಯಾವ ಕೆಲಸ ಮಾಡಲೂ ಮನಸ್ಸು ಬಾರದು. ಹೀಗಾಗಿ ನಾವೆಲ್ಲರೂ ಆರೋಗ್ಯ ಕಾಳಜಿ ವಹಿಸಬೇಕು ಎಂದು ಕುಲಗೋಡ ೇತ್ರ ಆರೋಗ್ಯ ಶಿಣಾಧಿಕಾರಿ ಬಿ.ಬಿ. ಈಶ್ವರಪ್ಪಗೋಳ ಹೇಳಿದರು.

ತಾಲೂಕಿನ ಕಲ್ಲೋಳಿಯ ರಾಮಲಿಂಗೇಶ್ವರ ಶಿಣ ಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ, ರೆಡ್​ ಕ್ರಾಸ್​, ರೆಡ್​ ರಿಬ್ಬನ್​ ಕ್ಲಬ್​ ಹಾಗೂ ಗೋಕಾಕ ತಾಲೂಕು ಆರೋಗ್ಯ ಇಲಾಖೆ ಸಹಯೋಗದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಮತ್ತು ರಸಪ್ರಶ್ನೆ ಸ್ಪರ್ಧೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಎನ್​ಎಸ್​ಎಸ್​ ಕಾರ್ಯಕ್ರಮಾಧಿಕಾರಿ ಶಂಕರ ನಿಂಗನೂರ ಮಾತನಾಡಿ, ಸರ್ಕಾರಗಳು ಜನತೆಗೆ ಉತ್ತಮ ಮತ್ತು ಉಚಿತ ಆರೋಗ್ಯ ಸೇವೆ ಒದಗಿಸುತ್ತಿದ್ದು, ಸದುಪಯೋಗ ಪಡೆಯಬೇಕು ಎಂದರು.

ರಸಪ್ರಶ್ನೆ ಸ್ಪರ್ಧೆ ವಿಜೇತ ವಿದ್ಯಾರ್ಥಿಗಳಿಗೆ ಆರೋಗ್ಯ ಇಲಾಖೆಯಿಂದ ಪ್ರಮಾಣಪತ್ರ ಮತ್ತು ಬಹುಮಾನ ವಿತರಿಸಲಾಯಿತು. ಗೋಕಾಕ ತಾಲೂಕು ೇತ್ರ ಆರೋಗ್ಯ ಶಿಣಾಧಿಕಾರಿ ಎಂ.ಸಿ. ನಾಯಕ, ಆರೋಗ್ಯ ಅಧಿಕಾರಿಗಳಾದ ಆರ್​.ಜಿ. ಬಸಾಪುರ, ಎಸ್​.ಎಸ್​. ಯರಗಟ್ಟಿ ಮಾತನಾಡಿದರು. ಕಾಲೇಜಿನ ಪ್ರಾಚಾರ್ಯ ಡಾ.ಸುರೇಶ ಹನಗಂಡಿ ಅಧ್ಯತೆ ವಹಿಸಿದ್ದರು. ಪ್ರೊ.ಡಿ.ಎಸ್​. ಹುಗ್ಗಿ, ಎಂ.ಬಿ. ಜಾಲಗಾರ, ಸಾಗರ ಐದಮನಿ ಇತರರಿದ್ದರು.