ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿರುವ ಬಸವೇಶ್ವರ ದೇವಾಲಯ ಟ್ರಸ್ಟ್ ಕಾರ್ಯದರ್ಶಿ ಪಡುವಳಲು ಹರೀಶ್. 
ಜಿಲ್ಲೆ

ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿ

ಅಭಿನಯ್ ಎಚ್.ಎಂ

ಬೇಲೂರು: ತಾಲೂಕಿನ ಪಡುವಳಲು ಗ್ರಾಮದಲ್ಲಿ 15ರಿಂದ 18ರವರೆಗೆ ಶ್ರೀ ಬಸವೇಶ್ವರ ದೇವಾಲಯ ಲೋಕಾರ್ಪಣೆ, ವಿಗ್ರಹಗಳ ಪ್ರತಿಷ್ಠಾಪನೆ, ಮತ್ತು ಶ್ರೀಮದ್ ರಂಭಾಪುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ನಡೆಯಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇ ಕೆಂದು ಎಂದು ಬಸವೇಶ್ವರ ದೇವಾಲಯ ಟ್ರಸ್ಟ್ ಕಾರ್ಯದರ್ಶಿ ಪಡುವಳಲು ಹರೀಶ್ ಮನವಿ ಮಾಡಿದರು.

ಫೆ.15ರಂದು ನೂತನ ದೇವಾಲಯ ಪ್ರವೇಶವಿರಲಿದೆ. 16ರಂದು ಬಸವೇಶ್ವರ ಮತ್ತು ಪರಿವಾರ ದೇವರ ವಿಗ್ರಹಗಳ ಪ್ರತಿಷ್ಠಾಪನೆ, ಕುಂಭಾಭಿಷೇಕ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಬಸವೇಶ್ವರ ದೇವಾಲಯ ಟ್ರಸ್ಟ್ ಮುಖಂಡ ತಮ್ಮಣ್ಣಗೌಡ ಮಾತನಾಡಿ, ಕಾರ್ಯಕ್ರಮದಲ್ಲಿ 1008 ಪೂರ್ಣಕುಂಭ ಸಮೇತ ಮಂಗಳವಾದ್ಯ, ವೀರಗಾಸೆ, ಚಂಡಿವಾದ್ಯ, ನಂದಿಧ್ವಜ, ಡೊಳ್ಳು ಕುಣಿತದೊಂದಿಗೆ ಗ್ರಾಮದ ರಾಜಬೀದಿಗಳಲ್ಲಿ ಬಾಳೆಹೊನ್ನೂರು ಶ್ರೀಗಳ ಅಡ್ಡಪಲ್ಲಕ್ಕಿ ಮಹೋತ್ಸವ ಮತ್ತು ಧಾರ್ಮಿಕ ಸಮಾರಂಭ ಆಯೋಜಿಸಲಾಗಿದೆ.ಅಡ್ಡ ಪಲ್ಲಕಿ ಮಹೋತ್ಸವಕ್ಕೆ 8000 ಸಾವಿರ ಭಕ್ತರು ಸೇರುವ ನಿರೀಕ್ಷೆ ಇದೆ ಎಂದರು.

ಬಸವೆಶ್ವರ ದೇವಾಲಯ ಟ್ರಸ್ಟ್ ಮುಖಂಡರಾದ ಸುನಿಲ್, ಸೋಮಶೇಖರ್, ಚಂದನ್ ಸುದ್ದಿಗೋಷ್ಠಿಯಲ್ಲಿದ್ದರು.