ಹುನಗುಂದ ತಾಲೂಕಿನ ಹಿರೇಮಳಗಾವಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಏಳನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮವನ್ನು ಮುಖ್ಯ ಶಿಕ್ಷಕಿ ಬಿ.ಬಿ. ದೇವದುರ್ಗ ಉದ್ಘಾಟಿಸಿದರು. ಶಿಕ್ಷಕ ಸಿದ್ದು ಶೀಲವಂತರ, ಸಂಗಮೇಶ ಪಾಟೀಲ ಮತ್ತಿತರರಿದ್ದಾರೆ. 
ಜಿಲ್ಲೆ

ಮಕ್ಕಳು ಭವಿಷ್ಯದ ಉಜ್ವಲ ನಕ್ಷತ್ರವಾಗಲಿ

ಹುನಗುಂದ: ಮಕ್ಕಳು ಭವಿಷ್ಯದ ಉಜ್ವಲ ನಕ್ಷತ್ರಗಳಾಗಬೇಕು. ಕಲಿತ ಶಾಲೆಗೆ, ಹೆತ್ತವರಿಗೆ ಹೆಸರು ತರುವ ವಿದ್ಯಾರ್ಥಿಗಳು ನೀವಾಗಬೇಕೆಂದು. ಶಾಲೆಯ ಮುಖ್ಯ ಶಿಕ್ಷಕಿ ಬಿ.ಬಿ. ದೇವದುರ್ಗ ಹೇಳಿದರು.

ತಾಲೂಕಿನ ಹಿರೇಮಳಗಾವಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಏಳನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನೌಕರರ ಸಂಘದ ಅಧ್ಯಕ್ಷ ಸಂಗಮೇಶ ಪಾಟೀಲ ಮಾತನಾಡಿ, ಪಾಲಕರು ಮಕ್ಕಳಿಗೆ ಮೊಬೈಲ್ ಬಳಕೆಗೆ ನೀಡದೆ, ಅಭ್ಯಾಸ ಮಾಡುವಂತೆ ನೋಡಿಕೊಳ್ಳಬೇಕು. ಮಕ್ಕಳ ಕಲಿಕೆಯಲ್ಲಿ ಶಿಕ್ಷಕರಷ್ಟೇ ಜವಬ್ದಾರಿ ಪಾಲಕರದ್ದು ಇರುತ್ತದೆ ಎಂದರು.

ಶಿಕ್ಷಕ ಸಿದ್ದು ಶೀಲವಂತರ ಮಾತನಾಡಿ, ಬೀಳ್ಕೊಡುಗೆ ಕ್ಷಣ ನಿಮಗೆ ಸ್ವಲ್ಪ ದುಃಖ ತಂದರೂ ಕೂಡ ಮುಂದಿನ ಭವಿಷ್ಯಕ್ಕಾಗಿ ನೀವು ಎಂಟನೇ ತರಗತಿಗೆ ಹೋಗಲೇಬೇಕು. ಏಳು ವರ್ಷದ ಜ್ಞಾನವನ್ನು ಮುಂದಿನ ಹಂತದಲ್ಲಿ ಬಳಸಿಕೊಂಡು ನಿಮ್ಮ ಬದುಕನ್ನ ಉಜ್ವಲಗೊಳಿಸಿಕೊಳ್ಳಿ ಎಂದರು.

ಶಾಲೆಗೆ ದೇಣಿಗೆ ನೀಡಿದ ಗೋದಲೆಪ್ಪ ಅತ್ತಾಲಟ್ಟಿ, ದೈಹಿಕ ಶಿಕ್ಷಕ ವಿ.ಎನ್.ಪಾಟೀಲ, ದೈಹಿಕ, ಶಿಕ್ಷಕರಾದ ಎಂ.ಟಿ ಗಚ್ಚಪ್ಪನವರ ರಮೇಶ್ ದೇಗಿನಾಳ, ರಮೇಶ ಭದ್ರಶೆಟ್ಟಿ, ಯಲ್ಲಪ್ಪ ಡೋಣಿ, ರತ್ನಕ್ಕ ಸುಬ್ಬನಗೌಡ ಪಾಟೀಲ, ನಿಂಗಪ್ಪ ಸಂಗಪ್ಪ ಹಡಪದ , ಪಾಪಣ್ಣ ಭದ್ರಶೆಟ್ಟಿ, ಡಿ.ಬಿ ಹರದೊಳ್ಳಿ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಸಂತೋಷ ಮಾದರ ಅವರನ್ನು ಸನ್ಮಾನಿಸಲಾಯಿತು.

ಎಸ್.ಬಿ.ಕನಕನ್ನವರ, ಸಂಗನಬಸಪ್ಪ ಭದ್ರಶೆಟ್ಟಿ, ಮಹಾಂತೇಶ ಭಾವಿಕಟ್ಟಿ, ಅಶೋಕಗೌಡ ಪಾಟೀಲ, ಮಾನಿಂಗಪ್ಪ ಡೋಣಿ, ಶಿಕ್ಷಕ ಕೆ.ವಿ.ಮಡಿವಾಳರ, ಪರಸು ಮೇಟಿ, ಬಸು ಮಾದರ, ಗ್ಯಾನಪ್ಪ ಮೇಟಿ, ಸಂಗಮೇಶ ಹೊಲ್ದೂರು, ಶಿಕ್ಷಕ ಅಂದಾನಯ್ಯ ವಸ್ತ್ರದ ಮತ್ತಿತರರಿದ್ದರು.

ಶಿಕ್ಷಕ ಮುತ್ತು ವಡ್ಡರ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಎಂ.ಎಚ್ ಪೂಜಾರ, ಶಿಕ್ಷಕ ಬಿ.ಎಂ.ಅಂಗಡಿ ಸ್ವಾಗತಿಸಿದರು. ಶಿಕ್ಷಕ ಹೆಚ್.ಬಿ.ಮಾದರ ವಂದಿಸಿದರು.