Oplus_131072 
ಜಿಲ್ಲೆ

ಬಸವೇಶ್ವರರ ಆಶಯ ಪಾಲನೆಯಾಗಲಿ

ಸೋಮಲಿಂಗ ತಳವಾರ

ರಾಮದುರ್ಗ: ಸಮಾಜದಲ್ಲಿ ಸನ್ಮಾರ್ಗಿಗಳಾಗಿ ಬದುಕಬೇಕಾದಲ್ಲಿ ಮಾತೆ ಅಕ್ಕಮಹಾದೇವಿ, ಜಗಜ್ಯೋತಿ ಬಸವೇಶ್ವರರ ಆದರ್ಶ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಬಸವ ಕಲ್ಯಾಣದ ಮಾತೆ ಸುಗುಣಾತಾಯಿ ಕರೆ ನೀಡಿದರು.

ತಾಲೂಕಿನ ಹೊಸಕೇರಿ&ಬಸವನಗರದ ಗ್ರಾಮದಲ್ಲಿ ಲಹಾರೇಶ್ವರ ಸಮಗ್ರ ಅಭಿವದ್ಧಿ ಟ್ರಸ್ಟ್​ ಕಮಿಟಿಯಿಂದ ಮಕರ ಸಂಕ್ರಮಣದ ಪ್ರಯುಕ್ತ ಸೋಮವಾರ ಹಮ್ಮಿಕೊಂಡಿದ್ದ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಬಸವಾದಿ ಶರಣರು ನುಡಿದಂತೆ ನಡೆದು, ವಚನ ಸಾಹಿತ್ಯವನ್ನು ಕೊಡುಗೆ ನೀಡಿದ್ದಾರೆ. ವಚನಗಳ ಸಾರ ಅರಿತು ಬಾಳಬೇಕು ಎಂದು ಹೇಳಿದರು. ಬಸವನಗರದ ಲಹಾರೇಶ್ವರ ತಪೋಭೂಮಿ ನಿರಂಜನಮೂರ್ತಿ ಮಾತೆ ನೀಲಲೋಚನ ತಾಯಿ ಮಾತನಾಡಿ, ಸಂಕ್ರಮಣ ಕಾಲದಲ್ಲಿ ಮಕ್ಕಳಿಗೆ ಆಧ್ಯಾತ್ಮಿಕ ಚಿಂತೆನೆ ತಿಳಿಸಿಕೊಡುವ ಕಾರ್ಯ ಮಾಡುತ್ತಿರುವುದು ಸಂಸತಿ&ಸಂಸ್ಕಾರದ ಪ್ರತಿಕ ಎಂದರು. ಪ್ರಕಾಶ ತಳವಾರ ಉದ್ಘಾಟಿಸಿದರು. ಶಿವಪ್ಪ ಕಿತ್ತಲಿ, ಮಹಾಲಿಂಗಯ್ಯ ಹಿರೇಮಠ, ಯಲ್ಲಪ್ಪ ತಳವಾರ, ನಿಂಗಪ್ಪ ತಳವಾರ, ಬಸಪ್ಪ ಮಲಕನ್ನವರ, ಸಂಗಪ್ಪ ಕಿತ್ತಲಿ, ಉಮೇಶ ಕನಕನ್ನವರ, ಪ್ರತಾಪ ಕನಕನ್ನವರ, ಶಂಕರ ಅಂಗಡಿ, ಹುಸೇನ ಖಾಕಂಡಕಿ, ನಾಗರಾಜ ಮಡಿವಾಳರ, ರವಿ ಜಾಲಪ್ಪನವರ ಇತರರಿದ್ದರು.