ಅಂಕಲಗಿ ಅಡವಿಸಿದ್ದೇಶ್ವರ ಮಠದಲ್ಲಿ ಕೃತಿ ಬಿಡುಗಡೆಗೊಳಿಸಲಾಯಿತು. ಅಮರಸಿದ್ಧೇಶ್ವರ ಶ್ರೀಗಳು, ರಾಜೇಂದ್ರ ಗೌಡಪ್ಪಗೋಳ, ಶೈಲಜಾ ಗುಂಡಣ್ಣವರ, ಮಂಗಳಾ ಪಾಶ್ಚಾಪುರೆ ಇತರರಿದ್ದರು. 
ಜಿಲ್ಲೆ

ಎಲ್ಲರೂ ಶಾಶ್ವತ ಸತ್ಕಾರ್ಯ ಮಾಡಲಿ

ಶಂಕರ ಗೆಜ್ಜಿ

ಅಂಕಲಗಿ: ಬದುಕಿನಿಂದ ದೂರ ಸರಿಯುವ ಮರೆಯದಂಥ ಸತ್ಕಾರ್ಯಗಳನ್ನು ಮಾಡಬೇಕು ಎಂದು ಸ್ಥಳೀಯ ಅಡವಿಸಿದ್ದೇಶ್ವರ ಮಠದ ಅಧ್ಯಕ್ಷ ಡಾ. ಅಮರಸಿದ್ಧೇಶ್ವರ ಶ್ರೀಗಳು ಹೇಳಿದರು.

ಮಠದಲ್ಲಿ ಶೈಲಾ ಗುಂಡಣ್ಣವರ ರಚಿಸಿದ ಗುರುವಂದನಾ ಹಾಗೂ ಹಳೆಯ ವಿದ್ಯಾರ್ಥಿಗಳ ಸಮ್ಮಿಲನ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು. ಆಧುನಿಕತೆ ಭರಾಟೆಯಲ್ಲಿ ಸಂಬಂಧಗಳು, ಆತ್ಮೀಯತೆ ಕಾಣದಾಗಿದ್ದು, ಈ ಕೃತಿ ಮೌಲ್ಯಯುತವಾಗಿದೆ ಎಂದರು.

ರಾಜೇಂದ್ರ ಗೌಡಪ್ಪಗೋಳ, ಶೈಲಜಾ ಗುಂಡಣ್ಣವರ, ಮಂಗಳಾ ಪಾಶ್ಚಾಪುರೆ, ಸುನೀಲ ಖತಗಲ್ಲಿ, ಮಂಗಳಾ ಕಾಪ್ಸೆ , ಅಡವೇಶ ಮುನವಳ್ಳಿ, ಜಾಹಿರ್ ಅಬ್ಬಾಸ್ ಖೋತವಾಲ್, ಜ್ಯೋತಿ ಪಾಶ್ಚಾಪುರೆ, ಬಸಲಿಂಗವ್ವ ಕೊಳವಿ, ಗಂಗಪ್ಪ ಅಂಗಡಿ, ಬಸಲಿಂಗಪ್ಪ ಗುಡದವರ,ರಾಜೇಂದ್ರ ಗೌಡಪ್ಪಗೋಳ, ಗಣಪತಿ ಬಡಿಗೇರ, ಸಿದ್ರಾಮ ಕುಂಬಾರ, ದುರ್ಗಾಪ್ರಸಾದ ಬಂಡಿವಡ್ಡರ, ಹಳೆಯ ವಿದ್ಯಾರ್ಥಿಗಳು ಇದ್ದರು.