ಭದ್ರಾವತಿ ತಾಲೂಕು ಹೊಳೆನೇರಳೇಕೆರೆ ಗ್ರಾಮದಲ್ಲಿ ಅಲ್‌ಖಸ್ವ ಟ್ರಸ್ಟ್‌ನಿಂದ ಶಾಸಕ ಬಿ.ಕೆ.ಸಂಗಮೇಶ್ವರ್ ಅವರನ್ನು ಸನ್ಮಾನಿಸಲಾಯಿತು. ಮಹಮದ್ ರಿಯಾಜ್, ಮೊಹಮದ್ ಫಸೀಉಲ್ಲಾ, ಮಹಮದ್ ಇರ್ಫಾನ್ ಖದಂಜಿ, ಫೈರೋಜ್ ಖಾನ್ ಇತರರಿದ್ದರು.  
ಜಿಲ್ಲೆ

ಅಲ್‌ಖಸ್ವ ಟ್ರಸ್ಟ್ ಉತ್ತಮ ಸೇವೆ ನೀಡಲಿ

ಭದ್ರಾವತಿ: ತಾಲೂಕಿನ ಹೊಳೆನೇರಳೆಕೆರೆ ಗ್ರಾಮದಲ್ಲಿ ನೂತನವಾಗಿ ಆರಂಭವಾದ ಅಲ್‌ಖಸ್ವ ಟ್ರಸ್ಟ್‌ಗೆ ಶಾಸಕ ಬಿ.ಕೆ.ಸಂಗಮೇಶ್ವರ್ ಗುರುವಾರ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಸಮಾಜಸೇವೆಗಾಗಿ ತೆರೆದಿರುವ ಅಲ್‌ಖಸ್ವ ಟ್ರಸ್ಟ್ ಉತ್ತಮ ಕಾರ್ಯ ಮಾಡಲಿ. ಟ್ರಸ್ಟ್‌ನ ಪದಾಧಿಕಾರಿಗಳು ಒಗ್ಗಟ್ಟಿನಿಂದ ಶ್ರಮಿಸಲಿ ಎಂದು ಹಾರೈಸಿದರು.

ಇದೇ ವೇಳೆ ಸಂಗಮೇಶ್ವರ್ ಅವರನ್ನು ಸನ್ಮಾನಿಸಲಾಯಿತು. ಗ್ರಾಮದ ಮಕ್ಕಳಿಗೆ ನೋಟ್‌ಬುಕ್, ಪೆನ್ ವಿತರಿಸಲಾಯಿತು. ಟ್ರಸ್ಟ್ ಅಧ್ಯಕ್ಷ ಮಹಮದ್ ರಿಯಾಜ್, ಉಪಾಧ್ಯಕ್ಷ ಮೊಹಮದ್ ಫಸೀಉಲ್ಲಾ, ಕಾರ್ಯದರ್ಶಿ ಮಹಮದ್ ಇರ್ಫಾನ್ ಖದಂಜಿ, ಫೈರೋಜ್ ಖಾನ್ ಇತರರಿದ್ದರು.