ಬದಿಯಡ್ಕ: ಮವ್ವಾರು ಶ್ರೀಕೃಷ್ಣ ಭಜನಾ ಮಂದಿರದ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಹಾಗೂ ಸಾರ್ವರ್ಜನಿಕ ಶ್ರೀ ಸತ್ಯನಾರಾಯಣ ಪೂಜೆ ಮಾ.11ರಂದು ಡಾ.ಮಾಧವ ಉಪಾಧ್ಯಾಯ ಬಳ್ಳಪದವು ನೇತೃತ್ವದಲ್ಲಿ ವೈದಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಬೆಳಗ್ಗೆ ದೀಪ ಪ್ರತಿಷ್ಠಾಪನೆ, ಗಣಪತಿಹೋಮ, ಶ್ರೀ ಮಂದಿರ ಮುಂಭಾಗದ ಶಾಶ್ವತ ಚಪ್ಪರ ಲೋಕಾರ್ಪಣೆ, ಭಜನೆ, ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಪ್ರಾರಂಭ, ನಾಗಸನ್ನಿಧಿಯಲ್ಲಿ ಕ್ಷೀರಾಭಿಷೇಕ, ಸೀಯಾಳಭಿಷೇಕ, ಅರಸಿನಾರ್ಚನೆ, ನಾಗತಂಬಿಲ, ಮಧ್ಯಾಹ್ನ ಮಹಾಪೂಜೆ, ಮಂಗಲಂ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಶ್ರೀ ಕೃಷ್ಣ ಭಜನ ಮಂದಿರದ ಸೇವಾ ಸಮಿತಿ ಅಧ್ಯಕ್ಷ ಗಂಗಾಧರ ರೈ ಮಠದಮೂಲೆ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸುವರು. ಉಪನ್ಯಾಸಕ ಡಾ.ರಾಧಾಕೃಷ್ಣ ಬೆಳ್ಳೂರು ಸಾಂಸ್ಕೃತಿಕ ಉಪನ್ಯಾಸ ನೀಡುವರು. ಹರಿನಾರಾಯಣ ಶಿರಂತ್ತಡ್ಕ, ಎಸ್.ಎನ್.ಮಯ್ಯ ಭಾಗವಹಿಸುವರು. ನಾರಾಯಣ ಎಂ.ಮಲ್ಲಮೂಲೆ, ನಿಶಾಂತ್ ರೈ ಪಿ.ಮವ್ವಾರು, ನಾಗರಾಜ ಭಟ್ ಮಠದಮೂಲೆ ಉಪಸ್ಥಿತರಿರುವರು. ಸಂಜೆ ಶ್ರೀ ಕೃಷ್ಣ ಭಜನ ಮಂದಿರದ ಮಾತೃಮಂಡಳಿ ಸದಸ್ಯೆಯರಿಂದ ತಿರುವಾದಿರ ಮತ್ತು ಕೈಕೊಟ್ಟಿಕಳಿ ಪ್ರದರ್ಶನಗೊಳ್ಳಲಿದೆ. ಕಣಿತ ಭಜನೆ, ಸಂಜೆ ಪಾಂಚಜನ್ಯ ಮಿತ್ರ ವೃಂದ ಮವ್ವಾರು ಪ್ರಾಯೋಜಕತ್ವದಲ್ಲಿ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ ಮೇಳದಿಂದ ಪಾಂಚಜನ್ಯ-ಗುರುದಕ್ಷಿಣೆ ಯಕ್ಷಗಾನ ಬಯಲಾಟ ನಡೆಯಲಿದೆ.