ನರಗುಂದ: ತಾಲೂಕಿನ ಕೊಣ್ಣೂರ ಗ್ರಾಮದ ಜಗದ್ಗುರು ಶ್ರೀ ಮೌನೇಶ್ವರ ಜಾತ್ರಾ ಮಹೋತ್ಸವದ ವಿವಿಧ ಧಾರ್ವಿುಕ ಕಾರ್ಯಕ್ರಮಗಳು ಏ. 18ರಂದು ಜರುಗಲಿವೆ.
ಬೆಳಗ್ಗೆ 6 ಗಂಟೆಗೆ ರುದ್ರಾಭಿಷೇಕ, ಮೌನೇಶ್ವರರ ಪಲ್ಲಕ್ಕಿ ಉತ್ಸವ, ಪುರವಂತರು ಹಾಗೂ ಸಕಲ ವಾದ್ಯವೈಭವಗಳೊಂದಿಗೆ ಸುಮಂಗಲೆಯರಿಂದ ಆರತಿ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜರುಗಲಿದೆ.
ಸಂಜೆ 5.30ಕ್ಕೆ ನಡೆಯಲಿರುವ ರಥೋತ್ಸವ ಕಾರ್ಯಕ್ರಮದಲ್ಲಿ ಕೊಣ್ಣೂರ ಚರಮೂರ್ತೆಶ್ವರ ವಿರಕ್ತಮಠದ ಡಾ. ಶಿವಕುಮಾರ ಶಿವಾಚಾರ್ಯರು, ಕಲ್ಮಠದ ಸಿದ್ಧ್ದಂಗ ಶಿವಾಚಾರ್ಯರು, ಶಿರೋಳದ ಅಭಿನವ ಶ್ರೀಯಚ್ಚರ ಮಹಾಸ್ವಾಮಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಟಿ.ಬಿ. ಶಿರಿಯಪ್ಪಗೌಡ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.