ಜಿಲ್ಲೆ

ಬಾಲಕನಿಗೆ ಲೈಂಗಿಕ ಕಿರುಕುಳ ಮೌಲಾನಾ ಬಂಧನ

Uttara Kannada - Subash Hegde

ಕುಮಟಾ:ಮಸೀದಿಯಲ್ಲಿ ಓದಲು ಬರುತ್ತಿದ್ದ ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಮೌಲಾನಾನನ್ನು ಕುಮಟಾ ಠಾಣೆ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಪಶ್ಚಿಮ ಬಂಗಾಳ ರಾಜ್ಯದ ಉತ್ತರ ದಿನಾಜಪುರದ ಹಾಲಿ ಕುಮಟಾ ಮುಂಸ್ಲಿಂ ಗಲ್ಲಿಯ ಮದೀನಾ ಮಸೀದಿಯಲ್ಲಿ ಮೌಲಾನಾ ಆಗಿರುವ ಅಬ್ದುಸ ಸಮದ್ ಜಿಯಾಜಿ ಎಂಬಾತನನ್ನು ಬಂಧಿಸಲಾಗಿದೆ.
ಶನಿವಾರ ರಾತ್ರಿ ಬಾಲಕನ ಬಟ್ಟೆ ಬಿಚ್ಚಿ ಲೈಂಗಿಕ ಕಿರುಕುಳ ನೀಡಿದ್ದ ಎನ್ನಲಾಗಿದೆ. ಅಲ್ಲದೆ, ಈ ಹಿಂದೆಯೂ ಆತ ಆರೀತಿ ನಡೆಸಿದ ಬಗ್ಗೆ ಬಾಲಕನ ತಂದೆ ಕುಮಟಾ ಠಾಣೆಯಲ್ಲಿ ದೂರು ನೀಡಿದ್ದರು. ಫೋಕ್ಸೊ ಕಾಯ್ದೆಯಡಿ ದೂರು ದಾಖಲಿಸಿಕೊಂಡು ಕ್ರಮ ವಹಿಸಲಾಗಿದೆ.