ಜಿಲ್ಲೆ

ಕೂಡಿಗೆಯಲ್ಲಿ ಮಾತು- ಮಾಧುರ್ಯ ಕಾರ್ಯಕ್ರಮ

ಸುನಿಲ್ ಪೊನ್ನೇಟಿ

ಕುಶಾಲನಗರ:

ಕುಶಾಲನಗರ ಕನ್ನಡ ಸಿರಿ ಸ್ನೇಹ ಬಳಗ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಕೂಡಿಗೆ ಇವರ ಆಶ್ರಯದಲ್ಲಿ ಕರ್ನಾಟಕ ಸುವರ್ಣ ಸಂಭ್ರಮ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ಜನ್ಮ ದಿನಾಚರಣೆ ಅಂಗವಾಗಿ ಮಾತು- ಮಾಧುರ್ಯ ಎಂಬ ಕಾರ್ಯಕ್ರಮ ಕೂಡಿಗೆಯ ಜಿಲ್ಲಾ ಶಿಕ್ಷಣ ತರಬೇತಿ ಕೇಂದ್ರದ ಸಭಾಂಗಣದಲ್ಲಿ ಬುಧವಾರ ನಡೆಯಿತು.

ಜಿಲ್ಲಾ ಶಿಕ್ಷಣ ತರಬೇತಿ ಕೇಂದ್ರದ ಉಪ ನಿರ್ದೇಶಕ ಎಂ. ಚಂದ್ರಕಾAತ್ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿ ಈ ಕಾರ್ಯಾಗಾರ ಪ್ರಸ್ತುತ ಶಿಕ್ಷಣ ತರಬೇತಿ ಕೇಂದ್ರದ ವಿದ್ಯಾರ್ಥಿಗಳಿಗೆ ಶಿಕ್ಷಣದ ಅಮೂಲ್ಯವಾದ ಕೌಶಲ್ಯ, ಜಾಗೃತಿ , ಕಲಿಕೆಯ ಆದರ್ಶಗಳನ್ನು ಮೈಗೂಡಿಸಿಕೊಳ್ಳಲು ಪೂರಕವಾಗಿದೆ. ವಿದ್ಯಾಭ್ಯಾಸದ ಜತೆಯಲ್ಲಿ ಉದ್ದೇಶದ ಗುರಿಯನ್ನು ಸಾಧಿಸಲು ಸಂಸ್ಕೃತಿ ಸಂಸ್ಕಾರದ ಉನ್ನತ ಆದರ್ಶಗಳನ್ನು ತಿಳಿದುಕೊಳ್ಳುವ ಮೂಲಕ ಸಮಾಜದ ಎಲ್ಲಾ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಲು ಇಂಥ ಕಾರ್ಯಗಾ ಪೂರಕವಾಗುತ್ತದೆ ಎಂದರು.

ಕನ್ನಡ ಸಿರಿ ಸ್ನೇಹ ಬಳಗ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಮಾತಾನಾಡಿ ಬ್ರಿಟಿಷರ ವಿರುದ್ಧ ಹೋರಾಡಿ ಭಾರತಕ್ಕೆ ಮೊದಲ ಜಯ ಎಂಬ ಹೆಗ್ಗಳಿಕೆ ತಂದುಕೊಟ್ಟ ಮತ್ತು ಭಾರತ ಕಂಡ ಮೊದಲ ಸ್ವಾತಂತ್ರ‍್ಯ ಹೋರಾಟದ 200ನೇ ವರ್ಷಾಚರಣೆ ಬಗ್ಗೆ, ಕಿತ್ತೂರು ರಾಣಿ ಚೆನ್ನಮ್ಮ ಅವರ ಧೈರ್ಯ ಸಾಹಸ, ಹೋರಾಟದ ಛಲ, ಆಡಳಿತ ವ್ಯವಸ್ಥೆ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.

ಡಯಟ್ ಹಿರಿಯ ಪ್ರಾಧ್ಯಾಪಕ ಮಂಜುನಾಥ ಮಾತಾನಾಡಿ ಮಾತು- ಮಾಧುರ್ಯದ ಮೂಲಕ ಪೂರ್ಣ ಜ್ಞಾನದ ಅರಿವು, ಮಾಹಿತಿಯ ಸಂಗ್ರಹ, ಉಚ್ಚಾರಣೆ, ಪದ ಜೋಡಣೆ , ಪದ ಬಳಕೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಯಲು ಪ್ರಶಿಕ್ಷಣಾರ್ತಿಗಳಿಗೆ ಅನುಕೂಲವಾಗುವುದು ಎಂದರು.

ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯ ವತಿಯಿಂದ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಮೂರು ವಿಭಾಗದಲ್ಲಿ ಭಾಗವಹಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಕುಶಾಲನಗರ ಬಾಲಿಕಾ ಪ್ರೌಢಶಾಲಾ ವಿದ್ಯಾರ್ಥಿ ಎಂ.ವಿ. ಜೀಶೀಯಾ ಅವರನ್ನು ಮತ್ತು ಈ ಸಾಲಿನ 10 ನೇ ತರಗತಿಯ ಪ್ರೌಢಶಾಲಾ ಫಲಿತಾಂಶದಲ್ಲಿ ಜಿಲ್ಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆಗೆ ಹೆಚ್ಚು ಮುತುರ್ಜಿ ವಹಿಸಿದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪ ನಿರ್ದೇಶಕ ಎಂ. ಚಂದ್ರಕಾತ್ ಅವರನ್ನು ಕಿತ್ತೂರು ರಾಣಿ ಚೆನ್ನಮ್ಮ ದಿನಾಚರಣೆಯ ಅಂಗವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಾಗಾರದಲ್ಲಿ ನಿವೃತ್ತ ಕಲಾ ಶಿಕ್ಷಕ ಉ.ರಾ. ನಾಗೇಶ್ ಕಾರ್ಯಕ್ರಮದ ನಿರೂಪಣೆಗೆ ಸಂಬAಧಿಸಿದAತೆ, ಶನಿವಾರಸಂತೆ ಪ್ರೌಢಶಾಲೆ ಶಿಕ್ಷಕ ಕೆ.ಪಿ. ಜಯಕುಮಾರ್ ರಸಾನುಭವ ಕುರಿತು ಹಾಗೂ ಭಾಷಣ ಮಾಡುವ ವಿಷಯದ ಕುರಿರು ಕೂಡಿಗೆ ಕ್ಲಸ್ಟರ್ ಕೇಂದ್ರದ ಸಮೂಹ ಸಂಪನ್ಮೂಲ ವ್ಯಕ್ತಿ ಕೆ. ಶಾಂತಕುಮಾರ್ ಮಾಹಿತಿ ನೀಡಿದರು.

ಡಯಟ್ ಪ್ರಾಧ್ಯಾಪಕ ಹೇಮಂತ್ ಕುಮಾರ್, ವಿಜಯ್, ಕನ್ನಡ ಸಿರಿ ಸ್ನೇಹ ಬಳಗದ ಕೆ. ಕೆ. ನಾಗರಾಜಶೆಟ್ಟ, ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಕೆ. ಪ್ರಕಾಶ್, ದೈಹಿಕ ಶಿಕ್ಷಣ ಶಿಕ್ಷಕ ಸದಾಶಿವ ಎಸ್ ಪಲ್ಲೇದ್, ಡಯಟ್ ಉಪನ್ಯಾಸಕ ವೃಂದ, ಪ್ರಶಿಕ್ಷಣಾರ್ತಿಗಳು ಇದ್ದರು.