ಜಿಲ್ಲೆ

ಭಾರತೀಯ ಕೃಷಿ ಅನುಸಂಧಾನ ಪರಿಷತ್ ಕೊಡುಗೆ ಅನನ್ಯ; ಕೆವಿಕೆ ಮುಖ್ಯಸ್ಥೆ ಶ್ರೀದೇವಿ ಅಂಗಡಿ ಹೇಳಿಕೆಕೆವಿಕೆ ಮುಖ್ಯಸ್ಥೆ ಶ್ರೀದೇವಿ ಅಂಗಡಿ ಹೇಳಿಕೆ

Belagavi - Ravi Arjun Gosavi

ಬೆಳಗಾವಿ  : ಭಾರತೀಯ ಕೃಷಿ ಅನುಸಂಧಾನ ಪರಿಷತ್ ಅಡಿಯ ವಿವಿಧ ಸಂಸ್ಥೆಗಳ ಸಾಧನೆ ಮತ್ತು ತಂತ್ರಜ್ಞಾನದ ಮಾಹಿತಿ ನೀಡುತ್ತಾ ಕೃಷಿ ಕ್ಷೇತ್ರದ ಅಭ್ಯುದಯಕ್ಕೆ ಭಾರತೀಯ ಕೃಷಿ ಅನುಸಂಧಾನ ಪರಿಷತ್ ಕೊಡುಗೆ ಬಹಳ ಅನನ್ಯವಾಗಿದೆ ಎಂದು ಐಸಿಆರ್ ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥೆ  ಶ್ರೀದೇವಿ ಅಂಗಡಿ ಹೇಳಿದರು.

ಬೈಲಹೊಂಗಲ ತಾಲೂಕಿನ ಮತ್ತಿಕೊಪ್ಪದಲ್ಲಿನ ಐಸಿಆರ್ ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 95ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ತಾಂತ್ರಿಕ ದಿನಾಚರಣೆ ಹಾಗೂ ಕೃಷಿ, ತೋಟಗಾರಿಕಾ ವಸ್ತು ಪ್ರದರ್ಶನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಸ್ತು ಪ್ರದರ್ಶನದಲ್ಲಿರುವ ಮೌಲ್ಯವರ್ಧನೆ ಹಾಗೂ ಸಿರಿಧಾನ್ಯ ಗಳಿಂದ ತಯಾರಿಸುವ ಖಾದ್ಯಗಳ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಸುತಗಟ್ಟಿ  ಗ್ರಾಮ ಪಂಚಾಯಿತಿ ಅಧ್ಯಕ್ಷ ಸೋಮಪ್ಪ ಉಪ್ಪಾರಟ್ಟಿ ಮಾತನಾಡಿ,  ರೈತರಿಗೆ ಮಣ್ಣು ಪರೀಕ್ಷೆ, ಬೀಜಗಳ ಸೌಲಭ್ಯ ಮತ್ತು ಸಸ್ಯ ಸಂರಕ್ಷಣೆ ಬಗ್ಗೆ ಮಾಹಿತಿ ನೀಡುವ ಪ್ರಯೋಗಾಲಯಗಳು ಹಾಗೂ ಕೃಷಿ ವಿಜ್ಞಾನ ಕೇಂದ್ರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ರೈತರಿಗೆ ಸಲಹೆ ನೀಡಿದರು.

ಮತ್ತಿಕೊಪ್ಪದಲ್ಲಿನ ಐಸಿಆರ್ ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರದಲ್ಲಿ ಭಾನುವಾರ ಕೃಷಿ, ತೋಟಗಾರಿಕಾ ವಸ್ತು ಪ್ರದರ್ಶನದಲ್ಲಿ ರೈತರಿಗೆ ಮಾಹಿತಿ ನೀಡಲಾಯಿತು. ಶ್ರೀದೇವಿ ಅಂಗಡಿ, ಸೋಮಪ್ಪ ಉಪ್ಪಾರಟ್ಟಿ, ಡಾ.ಎಸ್.ಎಸ್.ಹಿರೇಮಠ ಸೇರಿದಂತೆ ಇತರರಿದ್ದರು

ಶ್ರೀದೇವಿ ಅಂಗಡಿಯವರು ಸೋಯಾ, ಅವರೆ ತಳಿಗಳ ಬಗ್ಗೆ, ಡಾ.ಎಸ್.ಎಸ್.ಹಿರೇಮಠ ಅವರು, ಮುಂಗಾರು ಗಹಂಗಾಮಿನಲ್ಲಿ ಬರುವ ವಿವಿಧ ಬೆಳೆಗಳಿಗೆ ತಗಲುವ ರೋಗ  ಕೀಟಗಳ ಸಮಗ್ರ ನಿಯಂತ್ರಣದ ಬಗ್ಗೆ ಮತ್ತು ಜೈವಿಕ ಸಸ್ಯ ಜನ್ಯ ಕೀಟನಾಶಕ, ಹಸಿರೆಲೆ ಗೊಬ್ಬರ ಎರೆ ಹುಳು ತಯಾರಿಕೆ ಬಗ್ಗೆ  ಪ್ರಾಯೋಗಿಕವಾಗಿ ತಿಳಿ ಹೇಳಿದರು. ಕಾರ್ಯಕ್ರಮದಲ್ಲಿ ನೂರಾರು ರೈತರು ಪಾಲ್ಗೊಂಡಿದ್ದರು.