ಜಿಲ್ಲೆ

ಗರಡಿ ಮನೆಯಲ್ಲಿ ಮಟ್ಟಿಪೂಜೆ

ರೇಷ್ಮೆ ನಗರ ಡೆಸ್ಕ್

ನಾಳೆ 45 ಜೋಡಿ ಕುಸ್ತಿ ಪಂದ್ಯಾವಳಿ

 ಕನಕಪುರ : ನಗರದ ದೇಶಪೇಟೆ ಗರಡಿ ಮನೆಯಲ್ಲಿ ಹಿರಿಯ ದಿ.ಪೈಲ್ವಾನ್ ಬಸಪ್ಪ ಅವರ ಸ್ಮರಣಾರ್ಥ ನಡೆಯಲಿರುವ ಕುಸ್ತಿ ಪಂದ್ಯಾವಳಿಯ ಪ್ರಯುಕ್ತ ಗರಡಿ ಮನೆಯ ಆವರಣದಲ್ಲಿ ಶುಕ್ರವಾರ ಮಟ್ಟಿಪೂಜೆ ನೆರವೇರಿತು.

ಪೂಜೆ ಬಳಿಕ ಪೈಲ್ವಾನ್ ಮರಿಯಣ್ಣ ಮಾತನಾಡಿ, ಫೆ.16ರಂದು 45 ಜೋಡಿ ಕುಸ್ತಿ ಪಂದ್ಯಾವಳಿಯನ್ನು ಬೂದಿಕೆರೆ ರಸ್ತೆಯ ಕೃಷ್ಣ ಕಲ್ಯಾಣ ಮಂಟಪದ ಬಳಿ ಹಮ್ಮಿಕೊಳ್ಳಲಾಗಿದ್ದು, ಈಗಾಗಲೇ ಸ್ಪರ್ಧಿಗಳ ನೋಂದಣಿ ಪೂರ್ಣಗೊಂಡಿದೆ ಎಂದು ತಿಳಿಸಿದರು.

ಪೈಲ್ವಾನ್‌ಗಳಾದ ಮೋಟಪ್ಪ, ಮಾರೇಗೌಡ, ಜಯಣ್ಣ, ಬಾಲರಾಜು, ಜನಾರ್ದನ್, ರಾಜು, ಮೇಗಳ ಬೀದಿ ಹರೀಶ್, ರಾಜು, ನೀಲಿ ರಮೇಶ್, ಸಿದ್ದಮಾದು, ಮುತ್ತುರಾಜು, ಶೇಷಣ್ಣ, ಪ್ರಶಾಂತ್, ಕುಮಾರ್, ಸ್ವರೂಪ್ ದೊಡ್ಡಿಬೀದಿ ಕಿರಣ್, ಅರಳಾಳು ಯೋಗೇಶ್, ಮೇಗಳ ಬೀದಿ ಚರಣ್ ಹಾಜರಿದ್ದರು.