ಜಿಲ್ಲೆ

ಮಾತೃ ಧ್ಯಾನ ಮಾತೃ ಪೂಜನ ಕಾರ್ಯಕ್ರಮ

Mangaluru - Desk - Rajesh Shetty

ಬಂಟ್ವಾಳ: ಯಾರಿಂದಲೂ, ಯಾವುದರಿಂದಲೂ ತೀರಿಸಲಾಗದ್ದು ತಾಯಿ ಋಣ. ತಾಯಿ ವ್ಯಕ್ತಿತ್ವ ರೂಪಿಸುವ ಶಕ್ತಿಯಾಗಿದ್ದಾಳೆ. ಪ್ರತಿ ಮನುಷ್ಯನ ಯಶಸ್ಸಿನ ಹಿಂದೆ ತಾಯಿ ಮಾತೃಪ್ರೇರಕ ಶಕ್ತಿಯಾಗಿದ್ದಾಳೆ. ಮನೆಯೇ ಮೊದ ಪಾಠಶಾಲೆ, ತಾಯಿಯೇ ಮೊದಲ ಗುರು ಎನ್ನುವಂತೆ ತಾಯಿಯ ಪಾತ್ರ ಕುಟುಂಬದಲ್ಲಿ ಮಹತ್ತರವಾದುದು ಎಂದು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಪೊಳಲಿ ನಗರದ ಮಾರ್ಗದರ್ಶಕಿ ರೇಖಾ ಸತೀಶ್ ಕಾಜಿಲ ಹೇಳಿದರು.

ಕೊಯಿಲ ಶ್ರೀ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿ ಬದನಡಿಯಲ್ಲಿ ಮಾತೃ ಧ್ಯಾನ-ಮಾತೃ ಪೂಜನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಜಿಲ್ಲಾ ಲೆಕ್ಕಪತ್ರ ಪ್ರಮುಖ್ ಶಿವಪ್ರಸಾದ್ ಪೊಳಲಿ ಮಾತನಾಡಿ, ಮಾತೃಪೂಜನ ಕಾರ್ಯಕ್ರಮ ಗ್ರಾಮದ ವಿಕಾಸಕ್ಕೆ ಪೂರಕವಾದುದು. ಸಂಸ್ಕಾರಯುತ ಶಿಕ್ಷಣ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಮಾತೃಶಕ್ತಿಯ ಪ್ರಾಮುಖ್ಯದ ಬಗ್ಗೆ ತಿಳಿಸಿದರು. ಮಾತೃಧ್ಯಾನ-ಮಾತೃಪೂಜನ ಕಾರ್ಯಕ್ರಮ ನೇರವೇರಿಸಿದರು.

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರವೀಂದ್ರ ಪೂಜಾರಿ ಬದನಡಿ ಅಧ್ಯಕ್ಷತೆ ವಹಿಸಿದ್ದರು. ಭಜನಾ ಮಂಡಳಿ ಅಧ್ಯಕ್ಷ ಸಂದೇಶ್ ಅಂತರ, ಮಹಿಳಾ ಸಮಿತಿ ಅಧ್ಯಕ್ಷೆ ಸುಜಾತಾ ಉಪಸ್ಥಿತರಿದ್ದರು. ಭಜನಾ ಮಂಡಳಿ ಗೌರವಾಧ್ಯಕ್ಷ ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರ್ವಹಿಸಿದರು.