ಸಿರವಾರ ಉಪ ತಹಸೀಲ್ದಾರ್ ಸಿದ್ದನಗೌಡಗೆ ಶ್ರೀರಾಮಸೇನೆ ತಾಲೂಕು ಘಟಕದಿಂದ ಮನವಿ ಸಲ್ಲಿಸಲಾಯಿತು. ತಾಲೂಕು ಅಧ್ಯಕ್ಷ ಅಂಬು ನಾಯಕ, ಸೂರಪ್ಪ, ಗುರುಕಿರಣ್, ಸಾಗರ್, ವೆಂಕಟೇಶ, ರಂಜಿತ್, ವೀರೇಶ, ಮಂಜು, ರವಿ, ಮುಕ್ಕಣ್ಣ ಇತರರಿದ್ದರು. 
ಜಿಲ್ಲೆ

ಮೆಟ್ರಿಕ್ ನಂತರದ ವಸತಿ ನಿಲಯ ಆರಂಭಿಸಿ

ರುದ್ರಪ್ಪ ವಾಲಿ

ಸಿರವಾರ: ಪಟ್ಟಣದಲ್ಲಿ ಮೆಟ್ರಿಕ್ ನಂತರದ ಎಸ್ಸಿ, ಎಸ್ಟಿ ಹಾಗೂ ಒಬಿಸಿ ಬಾಲಕ ಮತ್ತು ಬಾಲಕಿಯರ ವಸತಿ ನಿಲಯಗಳನ್ನು ಆರಂಭಿಸುವಂತೆ ಶ್ರೀರಾಮ ಸೇನೆ ತಾಲೂಕು ಘಟಕದಿಂದ ಉಪ ತಹಸೀಲ್ದಾರ್ ಸಿದ್ದನಗೌಡಗೆ ಮನವಿ ಸಲ್ಲಿಸಲಾಯಿತು.

ಸಿರವಾರ ತಾಲೂಕು ಕೇಂದ್ರವಾಗಿ 6ರಿಂದ 7 ವಷರ್ ಗತಿಸಿದ್ದು, ಪ್ರಸ್ತುತ 4 ಪಿಯು ಕಾಲೇಜು ಹಾಗೂ 3 ಡಿಗ್ರಿ ಕಾಲೇಜುಗಳಿವೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಪ್ರತಿ ದಿನ ಹಳ್ಳಿಗಳಿಂದ ಪಟ್ಟಣಕ್ಕೆ ಬಸ್, ಖಾಸಗಿ ವಾಹನಗಳ ಮುಖಾಂತರ ಬರುತ್ತಿದ್ದಾರೆ.

ಹಳ್ಳಿಗಳಿಂದ ಬೆಳಗ್ಗೆ 7ಕ್ಕೆ ಬಸ್‌ಗಾಗಿ ಊಟ, ಉಪಾಹಾರ ಮಾಡದೆ ಅವಸರವಾಗಿ ಕಾಲೇಜಿಗೆ ಬರುವಂತಾಗಿದೆ. ಮಳೆಗಾಲದಲ್ಲಿ ವಿದ್ಯಾರ್ಥಿಗಳಿಗೆ ಬಹಳ ತೊಂದರೆಯಾಗುತ್ತಿದ್ದು, ಪ್ರತಿ ದಿನ ಓಡಾಟದಿಂದ ಸುಸ್ತಾಗಿ ಕಾಲೇಜು ವಿದ್ಯಾರ್ಥಿಗಳ ವಿದ್ಯಾಭ್ಯಾಸವು ಕುಂಠಿತವಾಗುತ್ತಿದೆ ಎಂದು ತಿಳಿಸಿದರು.