ಕಡಬ: ಕೈೊಲ ಗ್ರಾಮದ ಸಬಳೂರು ಸರ್ಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೆಟ್ರಿಕ್ ಮೇಳ ಸೋಮವಾರ ನಡೆಯಿತು.
ಕೈೊಲ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಯತೀಶ್ ಸೀಗೆತ್ತಡಿ ವ್ಯಾಪಾರ ನಡೆಸಿ ಮೆಟ್ರಿಕ್ ಮೇಳಕ್ಕೆ ಚಾಲನೆ ನೀಡಿದರು. ಕೈೊಲ ಗ್ರಾಮ ಪಂಚಾಯಿತಿ ಸದಸ್ಯ ಚಿದಾನಂದ ಪಾನ್ಯಾಲು, ಹಿರಿಯ ವಿದ್ಯಾರ್ಥಿ ಸಂ ಅಧ್ಯಕ್ಷ ಗಣೇಶ್ ಎರ್ಮಡ್ಕ, ಎಸ್.ಡಿ.ಎಂ.ಸಿ. ಅಧ್ಯಕ್ಷ ಶೇಖರ ಗೌಡ ಪಾಪುತಮಂಡೆ ಮೊದಲಾದವರಿದ್ದರು. ಮುಖ್ಯಶಿಕ್ಷಕಿ ವಾರಿಜಾ ಬಿ. ಸ್ವಾಗತಿಸಿ, ವಂದಿಸಿದರು.
ವಿದ್ಯಾರ್ಥಿಗಳಲ್ಲಿ ವ್ಯವಹಾರ ಜ್ಞಾನ ಬೆಳೆಸುವ ಸಲುವಾಗಿ ಆಯೋಜಿಸಿದ ಮೆಟ್ರಿಕ್ ಮೇಳದಲ್ಲಿ ವಿದ್ಯಾರ್ಥಿಗಳು 17,650 ರೂ. ವ್ಯಾಪಾರ ನಡೆಸಿದರು. 4ನೇ ತರಗತಿಯ ವಿದ್ಯಾರ್ಥಿನಿ ಪ್ರತೀಕ್ಷಾ 1,180 ರೂ. ವ್ಯಾಪಾರ ನಡೆಸಿ ಪ್ರಥಮ ಹಾಗೂ 6ನೇ ತರಗತಿಯ ವಿದ್ಯಾರ್ಥಿನಿ ಅರ್ಫಾ 1,160 ರೂ. ವ್ಯಾಪಾರ ನಡೆಸಿ ದ್ವಿತೀಯ ಸ್ಥಾನ ಪಡೆದರು.