ವಿಜಯಪುರ: ವಿಶ್ವದ ಶ್ರೇಷ್ಠ ನರ್ಸ್ ಆಗಿ ಸೇವೆ ಸಲ್ಲಿಸಿದ ಫ್ಲಾರೆನ್ಸ್ ನೈಂಟಿಗೇಲ್ ಜನ್ಮದಿನವನ್ನು ಅಂತರ ರಾಷ್ಟ್ರೀಯ ಶುಶ್ರೂಷ ದಿನವಾಗಿ ಆಚರಿಸಲಾಗುತ್ತದೆ.
ಫ್ಲಾರೆನ್ಸ್ ನೈಂಟಿಗೇಲ್ ಶ್ರೀಮಂತ ಮನೆತನದಲ್ಲಿ ಹುಟ್ಟಿದರೂ ಈ ವೃತ್ತಿ ಆಯ್ಕೆ ಮಾಡಿಕೊಂಡರು. ಅವರ ತ್ಯಾಗ ಸೇವೆ ಜಗತ್ತಿನಾದ್ಯಂತ ಇಂದಿಗೂ ಸ್ಮರಣೀಯ. ಮಾತೃ ಸಮಾನರಾದ ನರ್ಸ್ಗಳ ಸೇವೆ ನಿಜಕ್ಕೂ ಅನನ್ಯ ಎಂದು ಆಕ್ಸಫರ್ಡ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು.
ನಗರದ ಮಾತೋಶ್ರೀ ಗೌರಮ್ಮ ಅಪ್ಪಾಸಾಹೇಬ ಬಬಲೇಶ್ವರ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಎಕ್ಸಲಂಟ್ ಕಾಲೇಜ್ ಆಫ್ ನರ್ಸಿಂಗ್ ಮಹಾವಿದ್ಯಾಲಯದಲ್ಲಿ ಸೋಮವಾರ ನಡೆದ ಅಂತರ ರಾಷ್ಟ್ರೀಯ ಶುಶ್ರೂಷ ದಿನಾಚರಣೆ ಮುಖ್ಯ ಅತಿಥಿಯಾಗಿ ಆಗಮಸಿ ಅವರು ಮಾತನಾಡಿ, ನರ್ಸಿಂಗ್ ಮಹಾವಿದ್ಯಾಲಯದಲ್ಲಿ ಓದುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೆ ಫ್ಲಾರೆನ್ಸ್ ನೈಂಟಿಗೇಲ್ ಬದುಕು ಒಂದು ಪ್ರೇರಣೆಯಾಗಲಿ ಎಂದು ಅವರು ಹೇಳಿದರು.
ಅಖಿಲಾ ಬಿರಾದಾರ, ಅಂಜುಮ್ ಹತ್ತಿರಕಿಹಾಳ, ಆಕಾಶ ಮಲನೂರ, ರಾಜು ತಿಡುಗುಂದಿ, ಅಶ್ವಿನಿ ಸಾಲ್ಗಾರ, ಸಮತಾ ಸಿಂಗಾಡಿ, ಪಂಕಜ ಪವಾರ, ಮಲ್ಲಿಕಾರ್ಜುನ ಎಸ್.ಕೆ., ಸಂಸ್ಥೆಯ ಸಿಬ್ಬಂದಿ ವರ್ಗ ಮತ್ತಿತರರಿದ್ದರು.