ಹಾವೇರಿ: ತಾಲೂಕಿನ ಕರ್ಜಗಿ ಪ್ಲಾಟ್ ಗ್ರಾಮದ ಬಸ್ ನಿಲ್ದಾಣ ಬಳಿಯ ಸಾರ್ವಜನಿಕ ರಸ್ತೆಯಲ್ಲಿ ಮಟ್ಕಾ ಜೂಜಾಟವಾಡುತ್ತಿದ್ದ ವ್ಯಕ್ತಿಯ ವಿರುದ್ದ ಎಫ್ಐಆರ್ ದಾಖಲಾಗಿದೆ.
ಕರ್ಜಗಿ ಪ್ಲಾಟ್ ಗ್ರಾಮದ ಮೈನುದ್ದೀನ ರಾಜೇಸಾಬ್ ಗುತ್ತಲ (38) ಎಂಬಾತನ ವಿರುದ್ದ ದೂರು ದಾಖಲಾಗಿದೆ. ಈತ ತನ್ನ ಪಾಯಿದೆಗೋಸ್ಕರ ರಸ್ತೆಯಲ್ಲಿ ಓಡಾಡುವವರನ್ನು ಕರೆದು ಒಂದು ರೂ. ಗೆ 80 ರೂ.ಕೊಡುವುದಾಗಿ ಕೂಗಿ ಕರೆಯುತ್ತಿದ್ದ. ಅಕ್ರಮ ಚಟುವಟಿಕೆ ಮಟ್ಕಾ ಜೂಜಾಟವಾಡುತ್ತಿದ್ದನೆಂದು ಎಫ್ಐಆರ್ನಲ್ಲಿ ತಿಳಿಸಿದೆ. ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.