ಜಿಲ್ಲೆ

ಮಟ್ಕಾ ಬರೆಯುತ್ತಿದ್ದವನ ಬಂಧನ

ಬಸವರಾಜ ವೀರಪ್ಪ ಗರಗ

ಮುಂಡಗೋಡ: ತಾಲೂಕಿನ ಪಾಳಾ ಗ್ರಾಮದಲ್ಲಿ ತನ್ನ ಲಾಭಕ್ಕೋಸ್ಕರ ಮಟ್ಕಾ ಬರೆಯುತ್ತಿದ್ದ ವ್ಯಕ್ತಿಯೊಬ್ಬನನ್ನು ಶುಕ್ರವಾರ ಬಂಧಿಸಿ ಪ್ರಕರಣ ದಾಖಲಿಸಲಾಗಿದೆ.

ಪಾಳಾ ಗ್ರಾಮದ ಶ್ರೀಧರ ನಾರಾಯಣ ಕೊಡಿಯಾ ಬಂಧಿತ. ಗ್ರಾಮದ ಪಾದಗಟ್ಟಿ ಬಳಿ ತನ್ನ ಲಾಭಕ್ಕೋಸ್ಕರ ಒಂದು ರೂ.ಗೆ 80 ರೂ. ನೀಡುವ ಕರಾರಿನ ಮೇರೆಗೆ ಒಬ್ಬರಿಗೆ ಅನ್ಯಾಯದ ಲಾಭ ನಡೆಸಿ ಇನ್ನೊಬ್ಬರಿಗೆ ನಷ್ಟ ಆಗುವಂತೆ ಅಂಕಿ-ಸಂಖ್ಯೆಗಳ ಮೇಲೆ ಹಣವನ್ನು ಪಂಥ ಕಟ್ಟಿ ಓಸಿ ಬರೆಯುತ್ತಿದ್ದ.

ಇವನ ವಿರುದ್ಧ ಪಿಎಸ್​ಐ ಪರಶುರಾಮ ಮಿರ್ಜಗಿ ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆ.