ಜಿಲ್ಲೆ

ಗಣಿತ ಶಿಕ್ಷಕರಿಗಾಗಿ ಕಾರ್ಯಾಗಾರ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ವಿಜಯನಗರ ಲಯನ್ಸ್ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಧಾರವಾಡ ಜಿಲ್ಲಾ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಗಳ ಸಂ, ಯುನಿವರ್ಸಲ್ ಸೈಂಟಿಫಿಕ್ಸ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ಸುಮಾರು 25 ಶಾಲೆಗಳ ಗಣಿತ ಶಿಕ್ಷಕರಿಗೆ ಕಾರ್ಯಾಗಾರ ಏರ್ಪಡಿಸಲಾಗಿತ್ತು.

ಕಾರ್ಯಕ್ರಮ ಉದ್ಘಾಟಿಸಿದ ಧಾರವಾಡ ಜಿಲ್ಲಾ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಯ ಉಪಾಧ್ಯಕ್ಷ ಹಾಗೂ ಹುಡಾ ಮಾಜಿ ಅಧ್ಯಕ್ಷ ಲಿಂಗರಾಜ ಪಾಟೀಲ್ ಮಾತನಾಡಿ, ಪ್ರತಿಯೊಂದು ಶಾಲೆಯವರು ಗಣಿತ ಪ್ರಯೋಗಾಲಯ ಪ್ರಾರಂಭ ಮಾಡಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಮಂಡಳಿಯ ಅಧ್ಯಕ್ಷ ಜಯಪ್ರಕಾಶ ಟೆಂಗಿನಕಾಯಿ ಮಾತನಾಡಿ, ಗಣಿತ ಪ್ರಯೋಗಾಲಯದ ಮಹತ್ವವನ್ನು ತಿಳಿಸಿದರು.

ಯುನಿವರ್ಸಲ್ ಸೆಂಟಿಫಿಕ್ಸ ಸಂಸ್ಥೆಯ ಮುಖ್ಯಸ್ಥ ಡಾ. ವೀರಣ್ಣ ಬೋಳಿಶೆಟ್ಟಿ ಅವರು, ಶಾಲೆಯಲ್ಲಿ ಗಣಿತ ಪ್ರಯೋಗಾಲಯ ಮಾಡುವುದರಿಂದ ಆಗುವ ಉಪಯೋಗಗಳನ್ನು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು. ನೂತನವಾಗಿ ಸಿಬಿಎಸ್ಇ ಪಠ್ಯಕ್ರಮದೊಂದಿಗೆ ಪ್ರಾರಂಭ ಮಾಡುವ ಶಾಲೆಗಳಲ್ಲಿ ಸುಸಜ್ಜಿತವಾದ ಗಣಿತ ಪ್ರಯೋಗಾಲಯ ಇದ್ದರೆ ಮಾತ್ರ ಕೇಂದ್ರ ಸರ್ಕಾರವು ಅನುಮತಿ ಕೊಡುತ್ತದೆ ಎಂದರು.

ಜೈಂಟ್ ಸ್ಕೂಲ್ ನ ಎಂ.ಕೆ. ಬಾಬಜಿ, ಚೇತನ ಶಿಕ್ಷಣ ಸಂಸ್ಥೆಯ ಅಧ್ಯ ಜಿ.ವಿ. ವಳಸಂಗ, ಸಂಸ್ಕಾರ ಸ್ಕೂಲ್ನ ಮಹಾವೀರ ಕಂದೂರು, ಸುವರ್ಣಲತಾ, ಚೇತನ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ಎಂ.ಎಂ. ಕರೀಗೌಡರ, ಲಯನ್ಸ ಶಾಲೆಯ ಪ್ರಾಚಾರ್ಯ ನೇಹಾ ಗಾಡಗೋಳಿ ಇತರರು ಇದ್ದರು.

ಮಹಾವೀರ, ರೋಟರಿ, ಲಯನ್ಸ, ಪಿಳ್ಳೆ, ಆರ್.ಎನ್.ಎಸ್, ಎಸ್.ಬಿ.ಐ, ಚಿನ್ಮಯ, ಜೆ.ಕೆ
ಮುಂತಾದ ಶಾಲೆಗಳಿಂದ 55 ಗಣಿತ ಶಿಕ್ಷಕರು ಭಾಗವಹಿಸಿದ್ದರು.

ಮಹಾವೀರ ಶಿಕ್ಷಣ ಸಂಸ್ಥೆಯ ಅಧ್ಯ ಪ್ರೊ. ಎಸ್.ಕೆ. ಆದಪ್ಪನವರ ಸ್ವಾಗತಿಸಿದರು.