ಜಿಲ್ಲೆ

ಗಣಿತ ಉಪನ್ಯಾಸಕರ ಕಾರ್ಯಾಗಾರ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ

ಕಬ್ಬಿಣ ಕಡಲೆಯಾದ ಗಣಿತ ವಿಷಯವನ್ನು ಮಕ್ಕಳಿಗೆ ಸರಳೀಕರಿಸಿ ಹೇಳುವ ಪ್ರಯತ್ನ ಮಾಡಬೇಕು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ಪಿ. ಸುರೇಶ ಹೇಳಿದರು.

ನಗರದ ಸಿ.ವಿ. ರಾಮನ್​ ವಿಜ್ಞಾನ ಹಾಗೂ ವಾಣಿಜ್ಯ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ಗಣಿತ ಉಪನ್ಯಾಸಕರ ಕಾರ್ಯಗಾರದಲ್ಲಿ ಅವರು ಮಾತನಾಡಿದರು.

ಗಣಿತ ಉಪನ್ಯಾಸಕರ ವೇದಿಕೆ ಅಧ್ಯಕ್ಷ ಎಸ್​.ಆರ್​. ವಿಘ್ನೇಶಿ ಮಾತನಾಡಿ, ಇಂದಿನ ಮಕ್ಕಳಲ್ಲಿ ಗುಣಾತ್ಮಕ ಬೆಳವಣಿಗೆಗೆ ಎಲ್ಲ ಗಣಿತ ಉಪನ್ಯಾಕರು ಆಸಕ್ತಿಯಿಂದ ಪಾಠ ಮಾಡಬೇಕು. ಈ ಶೈಕ್ಷಣಿಕ ವರ್ಷದ ಫಲಿತಾಂಶವನ್ನು ಅತ್ಯುತ್ತಮವಾಗಿಸಲು ಎಲ್ಲ ಉಪನ್ಯಾಸಕರು ಕೈ ಜೋಡಿಸಬೇಕು ಎಂದರು.

ಆರ್​.ಬಿ. ಚವ್ಹಾಣ ಅವರು ದ್ವೀತಿಯ ಪಿಯುಸಿ ಮಾದರಿ ಪ್ರಶ್ನೆ ಪತ್ರಿಕೆ ಕುರಿತು ಮಾತನಾಡಿದರು. ಎಂ.ಎಲ್​. ಪಾಟೀಲ ಗಣಿತ ವಿಷಯ ಕುರಿತು ಉಪನ್ಯಾಸ ನೀಡಿದರು.

ಎ.ಎ. ಅತ್ತಾರ್​, ಕಾಲೇಜಿನ ಸಂಸ್ಥಾಪಕ ಗಿರೀಶ ಹಾದಿಮನಿ, ಕಾಲೇಜಿನ ಗಣಿತ ಉಪನ್ಯಾಸಕರು, ಶಿಕ್ಷಕರು, ಇತರರು ಇದ್ದರು.

ಅನುರಾಧಾ ಆರಾಧ್ಯಮಠ ಸ್ವಾಗತಿಸಿದರು. ಮಾರುತಿ ಕದಂ ವಂದಿಸಿದರು.