ಗಣಿತಶಾಸ್ತ್ರಜ್ಞ ಹಾಗೂ ವಿಜ್ಞಾನಿ ಕಲ್ಯಂಪುಡಿ ರಾಧಾಕೃಷ್ಣರಾವ್ ನಿಧನರಾದ ಹಿನ್ನೆಲೆಯಲ್ಲಿ ಹೂವಿನಹಗಡಲಿಯ ಜಿಬಿಆರ್ ಕಾಲೇಜಿನಲ್ಲಿ ಉಪನ್ಯಾಸಕರು ಮತ್ತು ಸಿಬ್ಬಂದಿ ಮೌನಾಚರಣೆ ಮಾಡುವ ಮೂಲಕ ಬುಧವಾರ ಶ್ರದ್ಧಾಂಜಲಿ ಸಲ್ಲಿಸಿದರು. ಪ್ರಾಚಾರ್ಯ ಎಸ್.ಎಸ್.ಪಾಟೀಲ ಉಪನ್ಯಾಸಕರಾದ ಡಾ.ವೈ.ಚಂದ್ರಬಾಬು, ಬಿ.ಮಲ್ಲಿಕಾರ್ಜುನ, ಬಿ.ಪ್ರಕಾಶ, ಸದಾಶಿವ ಹಾಗೂ ವಿದ್ಯಾರ್ಥಿಗಳು ಇತರರಿದ್ದರು. 
ಜಿಲ್ಲೆ

ಗಣಿತಶಾಸ್ತ್ರ ಕಲ್ಯಂಪುಡಿ ರಾಧಾಕೃಷ್ಣರಾವ್‌ಗೆ ಶ್ರದ್ಧಾಂಜಲಿ

ಹೂವಿನಹಡಗಲಿ: ಕಲ್ಯಂಪುಡಿ ರಾಧಾಕೃಷ್ಣರಾವ್ ಅವರ ಅಗಲಿಕೆಯಿಂದ ಸಂಖ್ಯಾಶಾಸ್ತ್ರ, ಗಣಿತಶಾಸ್ತ್ರ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಜಿಬಿಆರ್ ಕಾಲೇಜು ಪ್ರಾಚಾರ್ಯ ಎಸ್.ಎಸ್.ಪಾಟೀಲ್ ಹೇಳಿದರು.

ಶ್ರದ್ಧಾಂಜಲಿ

ಪಟ್ಟಣದ ಜಿಬಿಆರ್ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಕಲ್ಯಂಪುಡಿ ರಾಧಾಕೃಷ್ಣರಾವ್ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಲ್ಯಂಪುಡಿ ರಾಧಾಕೃಷ್ಣರಾವ್ ಅವರು ಗ್ರಾಮೀಣ ಭಾಗದಲ್ಲಿ ಜನಿಸಿ ರಾಷ್ಟ್ರ ಮತ್ತು ಅಂತಾರಾಷ್ಟ್ರ ಮಟ್ಟದಲ್ಲಿ ಹೆಚ್ಚು ಹೆಸರು ಮಾಡುವ ಮೂಲಕ ಹೂವಿನಹಡಗಲಿಯ ಕೀರ್ತಿ ಹೆಚ್ಚಿಸಿದ್ದರು.

ಇವರ ಸಂಶೋಧನೆ ಕೇವಲ ಸಂಖ್ಯಾಶಾಸ್ತ್ರಕ್ಕೆ ಸೀಮಿತವಾಗದೆ ವಿಜ್ಞಾನ ಕ್ಷೇತ್ರಕ್ಕೂ ಹಬ್ಬಿತ್ತು ಎಂದರು. ಹೊಳಲಿನ ಸ್ವಾಮಿವಿವೇಕಾನಂದ ಪಿಯು ಕಾಲೇಜು ಉಪನ್ಯಾಸಕ ಪರಶುರಾಮ ನಾಗೋಜಿ ಇವರ ಜೀವನ ಸಾಧನೆ ಬಗ್ಗೆ ತಿಳಿಸಿದರು.