ಬಾದಾಮಿ: ಇಷ್ಟಪಡುವವರಿಗೆ ಗಣಿತ ಸಿಹಿಯಾದ ಬೆಲ್ಲ ಇದ್ದಂತೆ ಎಂದು ಇಳಕಲ್ಲ ಡಯಟ್ ಉಪನ್ಯಾಸಕ ಅಶೋಕ ಕೊಡಗಲಿ ಹೇಳಿದರು.
ತಾಲೂಕಿನ ಚಿಕ್ಕಮುಚ್ಚಳಗುಡ್ಡದ ಆದರ್ಶ ವಿದ್ಯಾಲಯದಲ್ಲಿ ಮಂಗಳವಾರ ರಾಷ್ಟ್ರೀಯ ಗಣಿತ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗಣಿತ ಹಾಗೂ ಲೆಕ್ಕಾಚಾರ ನಮ್ಮ ಬದುಕಿನ ಭಾಗವಾಗಿದೆ. ಶಾಲೆಯಲ್ಲಿ ಗಣಿತ ಕಲಿಯುವುದರಿಂದ ಹಿಡಿದು ನಮ್ಮ ದೈನಂದಿನ ಬದುಕಿನಲ್ಲಿ ಗಣಿತ ಅಳವಡಿಸಿಕೊಳ್ಳುವವರೆಗೂ ಗಣಿತವನ್ನು ನಿರ್ಲಕ್ಷಿಸಲಾಗುವುದಿಲ್ಲ ಎಂದರು.
ಮುಖ್ಯಶಿಕ್ಷಕ ಶಂಕರರಾವ್ ಕುಲಕರ್ಣಿ, ಗಣಿತ ಶಿಕ್ಷಕಿ ರೇಣುಕಾ ಶಿಸ್ತಗಾರ ಮಾತನಾಡಿ, ಗಣಿತಕ್ಕೆ ಭಾರತೀಯರ ಕೊಡುಗೆ ಅಪಾರವಾಗಿದೆ. ಗಣಿತ ಸೂತ್ರ, ತಂತ್ರಗಳು ಆಸಕ್ತಿದಾಯಕವಾಗಿದ್ದು, ನಮ್ಮ ನಿರಂತರ ಬದುಕಿನಲ್ಲಿ ಇದನ್ನು ಕಲಿಯುವ ಮಹತ್ವದ ಬಗ್ಗೆ ಅರಿವು ಮೂಡಿಸಲು ಪ್ರತಿವರ್ಷ ರಾಷ್ಟ್ರೀಯ ಗಣಿತದಿನ ಆಚರಿಸಲಾಗುತ್ತಿದೆ ಎಂದರು.
ಶಿಕ್ಷಣ ಸಂಯೋಜಕ ಎಸ್.ಪಿ. ಗೌಡರ, ಗಣಿತ ಶಿಕ್ಷಕಿ ರೇಣುಕಾ ಶಿಸ್ತಗಾರ ಮಾತನಾಡಿದರು.
ಭಾಗ್ಯಲಕ್ಷ್ಮೀ ಟಿ.ಎಚ್., ಕೀರ್ತಿ ಬಡಿಗೇರ, ರಮೇಶ ಹಂಜಿ, ರಮೇಶ ಕತ್ತಿಕೈ, ಬಸವರಾಜ ಚಿಕ್ಕಣ್ಣವರ, ಬಸವರಾಜ ಸಿಂದಗಿಮಠ, ಶ್ರೀನಿವಾಸ ಈಳಗೇರ, ರಂಗನಾಥ ಈಳಗೇರ, ಅಶೋಕ ಪೂಜಾರಿ, ಎಸ್.ಬಿ. ಮುದೇನಗುಡಿ, ಕೇಶವ ರಘುವೀರ, ದುರ್ಗಾ ಬಿ., ವೀರೇಶ ಮರಿಗೌಡರ, ಹನುಮಂತ ಬಂಡಿವಡ್ಡರ ಇತರರಿದ್ದರು.