ಜಿಲ್ಲೆ

ಎರಡೆತ್ತಿನಮಠದಲ್ಲಿ ಶಿವಾನುಭವ ಗೋಷ್ಠಿ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ವೀರಾಪೂರ ಓಣಿಯ ಶ್ರೀ ಎರಡೆತ್ತಿನಮಠದಲ್ಲಿ ಮಾಸಿಕ ಶಿವಾನುಭವ ಕಾರ್ಯಕ್ರಮ ಗುರುವಾರ ನಡೆಯಿತು.

ಅತಿಥಿಯಾಗಿದ್ದ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಮಾತನಾಡಿ, ಶರಣರ ತತ್ವ, ಸಂದೇಶಗಳು ಇಂದಿಗೂ ಪ್ರಸ್ತುತ, ಅವುಗಳನ್ನು ಪಾಲಿಸುವ ಮೂಲಕ ಬದುಕು ಸುಂದರಗೊಳಿಸಿಕೊಳ್ಳಬೇಕು ಎಂದರು.

ಸಾನ್ನಿಧ್ಯ ವಹಿಸಿದ್ದ ಶ್ರೀಮಠದ ಸಿದ್ಧಲಿಂಗ ಸ್ವಾಮೀಜಿ ಆಶೀರ್ವಚನ ನೀಡಿದರು. ಮೃತ್ಯುಂಜಯ ಚೌಕಿಮಠ ಪ್ರವಚನ ನೀಡಿದರು.

ನಾದ ಬೈಠಕ ಕಲಾ ಬಳಗದವರು ಸಂಗೀತ ಸೇವೆ ನೀಡಿದರು. ಅಕ್ಕಮಹಾದೇವಿ ಬಾಲಕಿಯರ ಪ್ರೌಢಶಾಲೆ ವಿದ್ಯಾರ್ಥಿನಿಯರು ವಚನ ನೃತ್ಯ ಪ್ರದರ್ಶನ ನೀಡಿದರು.

ಪೊಲೀಸ್ ಅಧಿಕಾರಿಗಳಾದ ನಂದಗಾವಿ, ಚಿಕ್ಕಮಠ, ಎಸ್.ಆರ್. ನಾಯಕ, ಅಶೋಕ ಅವರನ್ನು ಸನ್ಮಾನಿಸಲಾಯಿತು. ಶ್ರೀಮಠದ ಸೇವಾ ಸಮಿತಿ ಸದಸ್ಯರು, ಭಕ್ತರು ಇದ್ದರು.
ಜೆ.ಟಿ. ಗಿರಿ ಕಾರ್ಯಕ್ರಮ ನಿರೂಪಿಸಿದರು. ಮಹಾಂತೇಶ ಬತ್ಲಿ ವಂದಿಸಿದರು.