ಜಿಲ್ಲೆ

ಮತಾಂತರ ನಿಷೇಧ ಕಾಯ್ದೆ ವಿರುದ್ಧ ಕಾನೂನಾತ್ಮಕ ಹೋರಾಟ, ಸ್ವರಾಜ್ ಇಂಡಿಯಾ ಪಾರ್ಟಿ ಜಿಲ್ಲಾಧ್ಯಕ್ಷರ ಹೇಳಿಕೆ

Chitradurga

ಚಿತ್ರದುರ್ಗ: ಪ್ರಸ್ತುತ ಅಧಿವೇಶನದಲ್ಲಿ ಪಾಸಾಗಿರುವ ಮತಾಂತರ ನಿಷೇಧ ಕಾಯ್ದೆಗೆ ಸ್ವರಾಜ್ ಇಂಡಿಯಾ ಪಾರ್ಟಿ ಜಿಲ್ಲಾಧ್ಯಕ್ಷ ಪ್ರೊ.ಜೆ. ಯಾದವ ರೆಡ್ಡಿ ವಿರೋಧ ವ್ಯಕ್ತಪಡಿಸಿದ್ದಾರೆ.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ಚುನಾವಣೆ ಕಾರಣದಿಂದ,ಬಹುಮತವಿದೆ ಎಂಬ ಒಂದೇ ಕಾರಣದಿಂದಾಗಿ ತರಾತುರಿಯಲ್ಲಿ ಕಾಯ್ದೆ ಜಾರಿಗೆ ರಾಜ್ಯಸರ್ಕಾರ ಮುಂದಾಗಿದೆ. ಇದನ್ನು ಪ್ರಬಲವಾಗಿ ವಿರೋಧಿಸಲು ಮುಂದಾಗದೆ ಪ್ರತಿಪಕ್ಷಗಳೂ ಈ ವಿಚಾರದಲ್ಲಿ ರಾಜಕಾರಣ ಮಾಡುತ್ತಿದ್ದು,ಕಾಯ್ದೆ ಪ್ರಶ್ನಿಸಿ ತಮ್ಮ ಪಕ್ಷ ಕಾನೂನಾತ್ಮಕ ಹೋರಾಟ ನಡೆಸಲಿದೆ ಎಂದರು.

ಮತಾಂತರ ಸಂವಿಧಾನ ಕೊಟ್ಟಿರುವ ಮೂಲ ಹಕ್ಕು, ಸಂವಿಧಾನದ ಆಶಯಕ್ಕೆ ವಿರು ದ್ಧವಾಗಿ ಸಂಘ ಪರಿವಾರ ಬೆಂಬಲಿತ ಬಿಜೆಪಿ ಸರ್ಕಾರ ಮುಂದಾಗಿದೆ. ಬಲವಂತದ ಮತಾಂತರಕ್ಕೆ ಶಿಕ್ಷೆ ಎಂಬ ಸರ್ಕಾರದ ಮಾತು ಸ್ವಾಗತಾರ್ಹ,ಆದರೆ ಆಮಿಷದ ಮತಾಂತರವೆಂದೂ ಹೇಳಿದೆ. ಹಸಿದ ವರಿಗೆ ಅನ್ನ,ಶಿಕ್ಷಣ,ಆರೋಗ್ಯ ಸೇವೆ ಒದಗಿಸುವುದು ಆಮಿಷವೇ?ಮತಾಂತರದಿಂದ ದೇಶದ ಭದ್ರತೆಗೆ ಏನಾದರೂ ಆತಂಕ ಎದು ರಾಗಿದೆಯೇ? ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗುತ್ತಿದೆಯೇ?

ಸದ್ಯರಾಜ್ಯದಲ್ಲಿ ಅನ್ಯ ಧರ್ಮೀಯರು ತಮ್ಮ ಪವಿತ್ರ ಗ್ರಂಥ ಹಿಡಿದು ಓಡಾಡಿದರೆ ತಪ್ಪೆನ್ನುವಂಥ ಆತಂಕಕಾರಿ ವಾತಾವರಣವಿದೆ. ನೈತಿಕ ಪೊಲೀಸ್ ಹೆಸರಲ್ಲಿ ಕಾನೂನನ್ನು ಕೈಗೆ ತೆಗೆದುಕೊಳ್ಳಲಾಗುತ್ತಿದೆ. ಲವ್‌ಜಿಹಾದ್ ಎಂಬುದು ಕಪಲೋಕಲ್ಪಿತವೆಂದು ಕೋರ್ಟ್ ಹೇಳಿ ದೆ.

2001ರಿಂದ 2011ರ ಅವಧಿ ದೇಶದಲ್ಲಿ ಮುಸ್ಲಿಂ,ಕ್ರಿಶ್ಚಿಯನ್‌ರ ಸಂಖ್ಯೆ ಕಡಿಮೆಯಾಗಿದೆ.

ಮತೀಯ ಕಾವಲುಗಾರರು ಕೊಟ್ಟಂಥ ಕ ಲ್ಪಿತ ವರದಿ ಆಧರಿಸಿ ಶ್ವೇತಪತ್ರ ಹೊರಡಿಸದೆ,ಚರ್ಚೆಗೂ ಅವಕಾಶವನ್ನೂ ಕೊಡದೆ,ಆಡಳಿತ ವೈಫಲ್ಯಮುಚ್ಚಿ,ರಾಜಕೀಯ ಲಾಭಕ್ಕಾಗಿ ಕಾ ಯ್ದೆ ಜಾರಿಗೆ ಮುಂದಾಗಿದ್ದು ಸರಿಯಲ್ಲ. ಯಾವುದೇ ಒಂದು ಧರ್ಮವನ್ನು ಇಟ್ಟುಕೊಂಡು ದೇಶ ಕಟ್ಟಲು ಸಾಧ್ಯವಿಲ್ಲವೆಂದರು. ರೈತ ಸಂಘದ ಧುರೀಣರಾದ ಟಿ.ನುಲೇನೂರು ಶಂಕರಪ್ಪ,ಧನಂಜಯ ಹಾಗೂ ಶಿವಕುಮಾರ್ ಹಾಗೂ ಸೈಯದ್‌ಇಸಾಕ್ ಅಹಮದ್ ಇದ್ದರು.

-----