ಮಂಗಳೂರು : ನಗರದ ಬೋಳೂರಿನಲ್ಲಿರುವ ಮಾತಾ ಅಮೃತಾನಂದಮಯಿ ಮಠದ ಆವರಣದಲ್ಲಿ ಅ.11ರಂದು ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ಅವರ 72ನೇ ಜನ್ಮ ದಿನಾಚರಣೆ ಅಂಗವಾಗಿ ಅಮೃತೋತ್ಸವ -25 ವೈವಿಧ್ಯಮಯ
ಕಾರ್ಯಕ್ರಮಗಳು ನಡೆಯಲಿದೆ ಎಂದು ಮಾತಾ ಅಮೃತಾನಂದಮಯಿ ಸೇವಾ ಸಮಿತಿಯ ಅಧ್ಯಕ್ಷ ಸುರೇಶ್ ಅಮೀನ್
ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅ.11ರಂದು ಬೆಳಗ್ಗೆ 8.45ಕ್ಕೆ ಸ್ವಾಮಿನಿ ಮಂಗಳಾಮೃತ ಪ್ರಾಣ ಅವರು ಅಮೃತಜೋತಿಯನ್ನು ಬೆಳಗಿಸುವ ಮೂಲಕ
ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಬೆಳಗ್ಗೆ 9ರಿಂದ ಶ್ರೀ ಗುರು ಪಾದುಕಾ ಪೂಜೆ, ಸತ್ಸಂಗ, ಭಜನೆ ಮತ್ತು ಧ್ಯಾನ ಹಾಗೂ 11ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದೆ. ವಿಧಾನ ಸಭೆಯ ಸ್ಪೀಕರ್ ಯು.ಟಿ.ಖಾದರ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಶಾಸಕ ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ,ಅಮೃತ ವಿಶ್ವವಿದ್ಯಾ ಪೀಠಂ ಕೊಚ್ಚಿ ಕ್ಯಾಂಪಸ್‌ನ ಡೀನ್ ಡಾ.ಯು.ಕೃಷ್ಣ ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಮಧಾಹ್ನ 12ಕ್ಕೆ ರವಿ ಅಲೆವೂರಾಯ ಮತ್ತು ತಂಡದವರಿಂದ ಅಮೃತಮಯಿ ಮಹಾತ್ಮೆ ಯಕ್ಷಗಾನ ಬಯಲಾಟ , 1.30ಕ್ಕೆ ಪ್ರಸಾದ ವಿತರಣೆ ಮತ್ತು ಅನ್ನಪ್ರಸಾದ, ಸಾಯಂಕಾಲ 4.30ಕ್ಕೆ ಬ್ರಹ್ಮಶ್ರೀ ಬಾಲಕೃಷ್ಣ ಭಟ್ ಮತ್ತು ತಂಡದಿಂದ ಶ್ರೀ ಚಕ್ರಪೂಜೆ ನೆರವೇರಲಿದೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ಡಾ.ವಸಂತಕುಮಾರ್ ಪೆರ್ಲ ತಿಳಿಸಿದರು.
ಖಜಾಂಚಿ ಯು.ರಾಮನಾಥ್ ನಾಯಕ್, ಸದಸ್ಯ ಡಾ.ದೇವದಾಸ ಪುತ್ರನ್ ಉಪಸ್ಥಿತರಿದ್ದರು.
................................................