ಮಾತಾ ಅಮೃತಾನಂದಮಯಿ  
ಜಿಲ್ಲೆ

ಮೈಸೂರಿಗೆ ನ.2, 3 ರಂದು ಮಾತಾ ಅಮೃತಾನಂದಮಯಿ ಭೇಟಿ

ಮೈಸೂರು: ಬೋಗಾದಿಯ ಮಾತಾ ಅಮೃತಾನಂದಮಯಿ ಮಠಕ್ಕೆ ನ.2, 3 ರಂದು ಮಾತಾ ಅಮೃತಾನಂದಮಯಿ ಭೇಟಿ ನೀಡಿ ಭಕ್ತರನ್ನು ಆಶೀರ್ವಾದಿಸಲಿದ್ದಾರೆ ಎಂದು ಹಿರಿಯ ವಕೀಲ ಓ. ಶ್ಯಾಮ್ ಭಟ್ ಹೇಳಿದರು.

ಎರಡೂ ದಿನ ಬೆಳಗ್ಗೆ 10 ರಿಂದ ಅಮ್ಮನವರು ಎಲ್ಲರಿಗೂ ಆಶೀರ್ವಾದ ಮಾಡಲಿದ್ದಾರೆ. ನ.2 ರಂದು ಬೆಳಗ್ಗೆ 10ಕ್ಕೆ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಡಾ.ಸಿ.ಎನ್. ಮಂಜುನಾಥ್, ಶಾಸಕ ಜಿ.ಟಿ. ದೇವೇಗೌಡ ಹಾಗೂ ಇತರರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.

ಈ ಸಂದರ್ಭ ಅಮೃತಾ ಕೃಪಾ ಆಸ್ಪತ್ರೆಯ ನೂತನ ಬ್ಲಾಕ್‌ಅನ್ನು ಮಾತಾ ಅಮೃತಾನಂದಮಯಿ ಉದ್ಘಾಟಿಸಲಿದ್ದಾರೆ. 15 ಹಾಸಿಗೆಗಳ ಆಸ್ಪತ್ರೆಯನ್ನು 100 ಹಾಸಿಗೆಗಳಿಗೆ ವಿಸ್ತರಿಸಲಾಗಿದೆ. ಇದರಲ್ಲಿ ಬಡ ಜನರಿಗೆ ಅನೇಕ ರೀತಿಯ ಸೌಲಭ್ಯಗಳಿರಲಿವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಭಕ್ತರಾದ ಪ್ರೊ.ಜಿ. ಹೇಮಂತ್‌ಕುಮಾರ್, ಪ್ರಸಾದಾಮೃತ ಚೈತನ್ಯ, ಡಾ.ವಿಕಾಸ್ ಮೋದಿ, ಡಾ. ಸೌಮ್ಯ ಮೋದಿ ಇದ್ದರು.