ಜಿಲ್ಲೆ

ಹೈನುಗಾರಿಕೆಯಿಂದ ಮಹಿಳೆಯರ ಆರ್ಥಿಕ ಸ್ವಾವಲಂಬನೆ: ಮನ್‌ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು ಹೇಳಿಕೆ

reportermys

ಪಾಂಡವಪುರ: ಹೈನುಗಾರಿಕೆಯಿಂದ ಮಹಿಳೆಯರು ಆರ್ಥಿಕ ಸ್ವಾವಲಂಬನೆ ಕಂಡುಕೊಂಡಿದ್ದು, ಬರುವ ಆದಾಯದಲ್ಲಿ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ ಎಂದು ಮನ್‌ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು ತಿಳಿಸಿದರು.
ತಾಲೂಕಿನ ಸುಂಕಾತೊಣ್ಣೂರು ವ್ಯಾಪ್ತಿಯ ಮೂಡಲಕೊಪ್ಪಲು, ಮೇನಾಗರ, ಅತ್ತಿಗಾನಹಳ್ಳಿ, ವದೇಸಮುದ್ರ, ಕುರಹಟ್ಟಿ ಹಾಗೂ ಮಾಡರಹಳ್ಳಿ ಗ್ರಾಮಗಳ ಹಾಲು ಉತ್ಪಾದಕರಿಗೆ ಸಬ್ಸಿಡಿ ದರದಲ್ಲಿ ರಬ್ಬರ್ ಮ್ಯಾಟ್‌ಗಳನ್ನು ವಿತರಿಸಿ ಮಾತನಾಡಿದರು.
ಹಾಲು ಉತ್ಪಾದಕರಿಂದ ರಬ್ಬರ್ ಮ್ಯಾಟ್‌ಗಳಿಗೆ ಬಹಳ ಬೇಡಿಕೆ ಇದೆ. ಜಿಲ್ಲೆಯಲ್ಲಿ 1.10 ಲಕ್ಷ ರೈತರು ಹಾಲು ಉತ್ಪಾದನೆಯಲ್ಲಿ ತೊಡಗಿದ್ದಾರೆ. ಎಲ್ಲರಿಗೂ ಒಟ್ಟಿಗೆ ಮ್ಯಾಟ್ ವಿತರಿಸಲು ಸಾಧ್ಯವಾಗುವುದಿಲ್ಲ. ಒಕ್ಕೂಟದ ಆರ್ಥಿಕತೆಗೆ ಧಕ್ಕೆಯಾಗದಂತೆ ಹಂತ ಹಂತವಾಗಿ ಮ್ಯಾಟ್ ಖರೀದಿಸಿ ವಿತರಿಸಲಾಗುವುದು. 25 ಸಾವಿರ ಮ್ಯಾಟ್ ಖರೀದಿಸಲು ಒಕ್ಕೂಟದ ವಾರ್ಷಿಕ ಮಹಾಸಭೆಯಲ್ಲಿ ತೀರ್ಮಾನಿಸಲಾಗಿದೆ. ರಾಸುಗಳ ಆರೋಗ್ಯ ರಕ್ಷಣೆಗಾಗಿ ಮ್ಯಾಟ್‌ಗಳ ಅವಶ್ಯಕತೆ ಇದೆ ಎಂದರು.
ಮನ್‌ಮುಲ್ ಉಪ ವ್ಯವಸ್ಥಾಪಕ ಆರ್.ಪ್ರಸಾದ್, ಮಾರ್ಗ ವಿಸ್ತರಣಾಧಿಕಾರಿಗಳಾದ ಜಗದೀಶ್, ಮಂಜುನಾಥ್, ಡೇರಿ ಅಧ್ಯಕ್ಷೆ ಸೌಮ್ಯಾ, ಉಪಾಧ್ಯಕ್ಷ ಶಿವಣ್ಣ, ಕಾರ್ಯದರ್ಶಿ ಎಸ್.ಕೆ.ರವಿ, ನಿರ್ದೇಶಕರಾದ ರಾಮಚಂದ್ರ, ಜ್ಞಾನೇಶ, ಕೃಷ್ಣೇಗೌಡ, ಸೋಮಶೇಖರ್, ಹೇಮಾವತಿ ಇತರರಿದ್ದರು.