ಕೊಳ್ಳೇಗಾಲ: ಕರಾಟೆ-ಡು-ಗೋಜುಕಾನ್ ಅಸೋಸಿಯೇಷನ್ ವತಿಯಿಂದ ಭಾನುವಾರ ಮೈಸೂರಿನ ಯೂನಿವರ್ಸಿಟಿ ಪೆವಿಲಿಯನ್ ಇಂಡೋರ್ ಸ್ಟೇಡಿಯಂನಲ್ಲಿ ನಡೆದ ಓಪನ್ ನ್ಯಾಷನಲ್ ಕರಾಟೆ ಚಾಂಪಿಯನ್‌ಷಿಪ್‌ನಲ್ಲಿ ಪಟ್ಟಣದ ಮಾಸ್ಟರ್ ಕರಾಟೆ ಅಕಾಡೆಮಿಯ ಕರಾಟೆ ಪಟುಗಳು 13 ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
9 ವಿದ್ಯಾರ್ಥಿಗಳು ತಲಾ 2 ವಿಭಾಗದಲ್ಲಿ (ಕಥಾ ಮತ್ತು ಕುಮಿಥೆ) ಸ್ಪರ್ಧಿಸಿ 9 ಪ್ರಥಮ ಸ್ಥಾನ, 2 ದ್ವಿತೀಯ ಸ್ಥಾನ, 2 ತೃತೀಯ ಸ್ಥಾನ ಒಟ್ಟು 13 ಬಹುಮಾನ ಪಡೆದಿದ್ದಾರೆ.
ಕರಾಟೆ ವಿದ್ಯಾರ್ಥಿಗಳಾದ ಅವನಿತ್ 2 ಪ್ರಥಮ, ಲಿಖಿತ್ ಜೋಗಿ 2 ಪ್ರಥಮ, ಯದುವೀರು 2 ಪ್ರಥಮ, ರಾಘವ್ 2 ಪ್ರಥಮ, ಭೃಥ್ವಕಣ್ವ 1 ಪ್ರಥಮ, ರಕ್ಷಾ 1 ದ್ವಿತೀಯ, ಕೃತಿಕ್ 1 ದ್ವಿತೀಯ, ಸಮೃದ್ 1 ತೃತೀಯ, ನಂದನ್ ಶ್ರೀವತ್ಸ 1 ತೃತೀಯ ಬಹುಮಾನ ಪಡೆದಿದ್ದಾರೆ. ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಕರಾಟೆ ಶಿಕ್ಷಕ ಕೆ.ನಂಜುಂಡಸ್ವಾಮಿ ಅಭಿನಂದಿಸಿದ್ದಾರೆ.