ಜಿಲ್ಲೆ

ಬೃಹತ್​ ಪ್ರತಿಭಟನೆ ಇಂದು

ಗಿರೀಶ ಸಗರ

ವಿಜಯಪುರ : ವಿಜಯಪುರ ಜಿಲ್ಲೆಗೆ ಸರ್ಕಾರಿ ವೈದ್ಯಕಿಯ ಕಾಲೇಜು ಆರಂಭಿಸಲು ಆಗ್ರಹಿಸಿ ಸೆ. 9 ರಂದು ಬೃಹತ್​ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಸರ್ಕಾರಿ ವೈದ್ಯಕಿಯ ಕಾಲೇಜು ಸ್ಥಾಪಿಸುವ ನಿಟ್ಟಿನಲ್ಲಿ ಈಗಾಗಲೇ ಈ ಹೋರಾಟಕ್ಕೆ ಕಳೆದ ಹಲವಾರು ದಿನಗಳಿಂದ ಸಭೆಗಳನ್ನು ಮಾಡಲಾಗಿದ್ದು, ವಿವಿಧ ಸಂಟನೆಗಳು ಮತ್ತು ಜಿಲ್ಲೆಯ ಜನರು ವ್ಯಾಪಕ ಬೆಂಬಲ ವ್ಯಕ್ತಪಡಿಸಿದ್ದಾರೆ. ಅಂದು ಬೆಳಗ್ಗೆ 10.30ಕ್ಕೆ ನಗರದ ಸಿದ್ಧೇಶ್ವರ ದೇವಸ್ಥಾನದಿಂದ ಮೆರವಣಿಗೆ ಆರಂಭಗೊಂಡು ವಿವಿಧ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ಬಳಿಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಸರ್ಕಾರ ವೈದ್ಯಕಿಯ ಕಾಲೇಜು ಸ್ಥಾಪನೆಗಾಗು ಹೋರಾಟ ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.