The Eightfold Path of Donation and Puja Festival 
ಜಿಲ್ಲೆ

ಎಸ್​ಟಿ ಸಮುದಾಯದ ವತಿಯಿಂದ 16ರಂದು ಬೃಹತ್​ ಪ್ರತಿಭಟನಾ ಮೆರವಣಿಗೆ

ಗಿರೀಶ ಸಗರ

ವಿಜಯಪುರ : ರಾಜ್ಯ ಸರ್ಕಾರ ವಾಲ್ಮೀಕಿ ಸಮಾಜಕ್ಕೆ ಅನ್ಯಾಯ ಮಾಡುತ್ತಿರುವ ಧೋರಣೆ ಖಂಡಿಸಿ ವಾಲ್ಮೀಕಿ ಎಸ್​ಟಿ ಸಮುದಾಯದ ವತಿಯಿಂದ ಸೆ. 16 ರಂದು ಬೃಹತ್​ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಅಂದು ಬೆಳಗ್ಗೆ 10 ಗಂಟೆಗೆ ನಗರದ ಸಿದ್ಧೇಶ್ವರ ದೇವಸ್ಥಾನದಿಂದ ಪ್ರತಿಭಟನಾ ಮೆರವಣಿಗೆ ವಿವಿಧ ಬೃಹತ್​ ಪ್ರಮುಖ ರಸ್ತೆಗಳ ಮೂಲಕ ಸಂಚರಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು. ಈ ಹಿನ್ನೆಲೆಯಲ್ಲಿ ಎಸ್​ಟಿ ಜನಾಂಗದವರು ಪ್ರತಿಭಟನಾ ಮೆರವಣಿಗೆ ಭಾಗವಹಿಸುವಂತೆ ಪ್ರಕಟಣೆ ತಿಳಿಸಿದೆ.