ಮೂಲ್ಕಿ: ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿ ಆರೋಪದಲ್ಲಿ ಬಿಜೆಪಿ ವತಿಯಿಂದ ಮೂಲ್ಕಿ ನಗರ ಪಂಚಾಯಿತಿ ಎದುರು ಮೂಲ್ಕಿ ನಗರ ಬಿಜೆಪಿ ಸಮಿತಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು.
ದ.ಕ. ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ನಂದನ್ ಮಲ್ಯ ಮಾತನಾಡಿ, ಭ್ರಷ್ಟ ಕಾಂಗ್ರೆಸ್ ಸರ್ಕಾರ ಎಲ್ಲ ರಂಗದಲ್ಲಿ ವಿಫಲಗೊಂಡಿದ್ದು ತೊಲಗುವವರೆಗೆ ಹೋರಾಟ ನಡೆಯಲಿದೆ ಎಂದರು.
ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸುನೀಲ್ ಆಳ್ವ ಮಾತನಾಡಿ, ಕಾಂಗ್ರೆಸ್ ಸರ್ಕಾರ ಹಗರಣದಲ್ಲಿ ಮುಳುಗಿ ಹೋಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾಜವಾದಿ ಎಂದು ಹೇಳಿಕೊಂಡು ಮಜಾವಾದಿಯಾಗಿದ್ದಾರೆ. ಗ್ಯಾರಂಟಿ ಯೋಜನೆಗಳಿಗೆ ಸರಿಯಾಗಿ ಹಣ ಹೊಂದಿಸಲಾಗದ ಸರ್ಕಾರ ವಾಮಮಾರ್ಗ ಹಿಡಿದಿರುವ ಕಾರಣ ಭ್ರಷ್ಟಾಚಾರ ಮುಗಿಲು ಮುಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ನಾಯಕರಾದ ಸತೀಶ್ ಅಂಚನ್, ಹರ್ಷರಾಜ ಶೆಟ್ಟಿ, ಪುರುಷೋತ್ತಮ ಬಡಗುಹಿತ್ಲು, ಸುಭಾಷ್ ಶೆಟ್ಟಿ, ದಯಾವತಿ ಅಂಚನ್, ಶೈಲೇಶ್ ಕುಮಾರ್, ವಿಠಲ್ ಎಂ.ಎಂ, ಶಶಿಕುಮಾರ್ ಕೆ.ಎಸ್.ರಾವ್ ನಗರ ಮತ್ತಿತರರು ಉಪಸ್ಥಿತರಿದ್ದರು.