ಮಡಿಕೇರಿ: ಎಸ್‌ವೈಎಸ್ ಕೊಡಗು ಜಿಲ್ಲಾ ಸಮಿತಿಯಿ ವತಿಯಿಂದ ಪ್ರವಾದಿ ಜನ್ಮದಿನದ ಅಂಗವಾಗಿ ಸೆ.೨೭ ರಂದು ಬೃಹತ್ ಈದ್ ಮಿಲಾದ್ ಘೋಷಣಾ ರ‌್ಯಾಲಿ ಹಾಗೂ ಪ್ರವಾದಿ ಪ್ರೇಮದ ಬಗ್ಗೆ ಭಾಷಣ ಕಾರ್ಯಕ್ರಮ ನಡೆಯಲಿದೆ ಎಂದು ಸಮಿತಿಯ ಕಾರ್ಯದರ್ಶಿ ಅಬೂಬಕರ್ ದಾರಿಮಿ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ೨೭ ರಂದು ಸಂಜೆ ೪ ಗಂಟೆಗೆ ಸಿದ್ದಾಪುರದ ಜುಮಾ ಮಸೀದಿಯ ಆವರಣದಲ್ಲಿ ಬೃಹತ್ ರ‌್ಯಾಲಿ ಆರಂಭವಾಗಿ ಸಿದ್ದಾಪುರ ನಗರದಲ್ಲಿ ಹಾದುಹೋಗಿ ನೆಲ್ಯಹುದಿಕೇರಿ ಶಾದಿ ಮಹಲ್ ಬಳಿ ರ‌್ಯಾಲಿ ಕೊನೆಗೊಳ್ಳಲಿದೆ. ನಂತರ ಮೌಲಿದ್ ಪಾರಾಯಣ ನಡೆಯಲಿದೆ. ಅಂದು ಜಿಲ್ಲೆಯ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಳ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿಕೊಡಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿ ಅಧ್ಯಕ್ಷ ಸಿಪಿಎಂ ಬಶೀರ್ ಹಾಜಿ, ನಿರ್ವಾಹಕ ಕಾರ್ಯದರ್ಶಿಗಳಾದ ಇಕ್ಬಾಲ್ ಮುಸ್ಲಿಯರ್, ಹನೀಫ್ ಮುಸ್ಲಿಯಾರ್, ಉಪಾಧ್ಯಕ್ಷರಾದ ಮುಹಮ್ಮದ್ ಆಲಿ, ರಫೀಕ್ ಹಾಜಿ ಉಪಸ್ಥಿತರಿದ್ದರು.